Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಡೇಜಾ ರೀತಿಯ ಆಟಗಾರರು 3 ಮಾದರಿಯ ಕ್ರಿಕೆಟ್‌ನಲ್ಲೂ ಇರಬೇಕು: ಸುರೇಶ್ ರೈನಾ

IPL 2021: player like Jadeja has to be in all formats of cricket said Suresh Raina

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಸಹ ಆಟಗಾರ ರವೀಂದ್ರ ಜಡೇಜಾ ಬಗ್ಗೆ ಪ್ರಶಂಸೆಯ ಮಾಡುಗಳನ್ನು ಆಡಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಓರ್ವ ಪರಿಪೂರ್ಣ ಕ್ರಿಕೆಟಿಗ ಎಂದು ಸುರೇಶ್ ರೈನಾ ಬಣ್ಣಿಸಿದ್ದಾರೆ.

ರವೀಂದ್ರ ಜಡೇಜಾ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿ ಜಡೇಜಾ ಈವರೆಗೆ 102 ರನ್‌ ಬಾರಿಸಿದ್ದು ಬೌಲಿಂಗ್‌ನಲ್ಲಿ ಐದು ವಿಕೆಟ್ ಕಬಳಿಸಿದ್ದಾರೆ. ಏಳು ಕ್ಯಾಚ್‌ಗಳನ್ನು ಪಡೆದು ಜಡ್ಡು ಮಿಂಚಿದ್ದಾರೆ.

ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಎಸ್‌ಕೆ ಟಿವಿಯಲ್ಲಿ ರವೀಂದ್ರ ಜಡೇಜಾ ಅವರ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ. "ಆತ ನಿಜಕ್ಕೂ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದ್ದಾರೆ, ಬೌಲಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದರ ಜೊತೆಗೆ ಈವರೆಗೆ ಅವರು 7-8 ಕ್ಯಾಚ್‌ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಹೀಗಾಗಿ ಜಡೇಜಾ ತರದ ಆಟಗಾರರು ಎಲ್ಲಾ ಮಾದರಿಯಲ್ಲಿಯೂ ಇರಬೇಕು" ಎಂದಿದ್ದಾರೆ ರೈನಾ.

ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ ಕಳೆದ ಒಂದು ದಶಕದಿಂದ ಚೆನ್ನೈ ತಂಡದಲ್ಲಿ ಸಹ ಆಟಗಾರರಾಗಿದ್ದಾರೆ. ಸುರೇಶ್ ರೈನಾ 2008ರಲ್ಲಿ ಐಪಿಎಲ್ ಆರಂಭಿಕ ಆವೃತ್ತಿಯಿಂದ ಸಿಎಸ್‌ಕೆ ತಂಡದ ಸಹ ಆಟಗಾರನಾಗಿದ್ದರೆ ಜಡೇಜಾ 2011ರಲ್ಲಿ ಚೆನ್ನೈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Story first published: Wednesday, April 28, 2021, 15:30 [IST]
Other articles published on Apr 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+