Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ : ಅತಿ ಹೆಚ್ಚು ಬಾರಿ 400+ ಬಾರಿಸಿರುವ ಆಟಗಾರರು ಯಾರು?

IPL 2021: Players Who Have Scored 400+ Runs In An IPL Season

ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ರನ್ ಹೊಳೆ ಹರಿಯುವುದು ಸಾಮಾನ್ಯ. ಹೆಚ್ಚು ರನ್ ಹೊಡೆದಷ್ಟು ಗೆಲ್ಲುವುದು ಸುಲಭ ಎನ್ನುವ ಕಾರಣದಿಂದಲೇ ಐಪಿಎಲ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ರನ್ ಬಾರಿಸುತ್ತಾರೆ ಎಂದರೆ ತಪ್ಪಾಗಲಾರದು.

ಇದುವರೆಗೂ ಒಟ್ಟು 13 ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳು ನಡೆದಿದ್ದು ಸಾಕಷ್ಟು ಬ್ಯಾಟಿಂಗ್ ದಾಖಲೆಗಳು ನಿರ್ಮಾಣವಾಗಿವೆ. ಆ ದಾಖಲೆಗಳ ಪೈಕಿ ಐಪಿಎಲ್ ಆವೃತ್ತಿಗಳಲ್ಲಿ ಅತಿ ಹೆಚ್ಚು ಬಾರಿ 400ಕ್ಕಿಂತ ಹೆಚ್ಚು ರನ್ ಬಾರಿಸಿರುವ ಆಟಗಾರ ದಾಖಲೆಯೂ ಸಹ ಒಂದು.

ಪವರ್ ಹಿಟ್ಟರ್ ಸುರೇಶ್ ರೈನಾ ಅತಿ ಹೆಚ್ಚು ಬಾರಿ 400ಕ್ಕಿಂತ ಅಧಿಕ ರನ್ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದುವರೆಗೂ ಒಟ್ಟು 9 ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ಸುರೇಶ್ ರೈನಾ 400+ ರನ್ ಬಾರಿಸಿದ್ದಾರೆ.

ಸುರೇಶ್ ರೈನಾರನ್ನು ಹೊರತುಪಡಿಸಿ ಉಳಿದಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ತಲಾ 7 ಐಪಿಎಲ್ ಆವೃತ್ತಿಗಳಲ್ಲಿ 400ಕ್ಕಿಂತ ಹೆಚ್ಚು ರನ್ ಬಾರಿಸಿದ್ದಾರೆ. ಈ ಮೂಲಕ ಈ ನಾಲ್ವರು ಕ್ರಿಕೆಟಿಗರು 400+ ರನ್‌ಗಳನ್ನು ಅತಿ ಹೆಚ್ಚು ಐಪಿಎಲ್ ಆವೃತ್ತಿಗಳಲ್ಲಿ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

Story first published: Wednesday, March 31, 2021, 12:44 [IST]
Other articles published on Mar 31, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+