Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ನಾಯಕನಾಗಿ ಕೊಹ್ಲಿಯಲ್ಲಿನ ವಿಶೇಷ ಸಾಮರ್ಥ್ಯದ ಬಗ್ಗೆ ಸುಂದರ್ ಮಾತು

IPL 2021: Playing With Virat Kohli Gets The Best Out Of Any Cricketer: Washington Sundar

ಆರ್‌ಸಿಬಿ ತಂಡದ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಬಾಂಧವ್ಯದ ಬಗ್ಗೆ ಮಾತಮಾಡಿದ್ದಾರೆ. ವಿರಾಟ್ ಕೊಹ್ಲಿ ತನಗೆ ಸಾಕಷ್ಟು ಸಂದರ್ಭಗಳಲ್ಲಿ ನೆರವಾಗಿದ್ದಾರೆ. ಕಳೆದ ನಾಲ್ಕೈದ ವರ್ಷಗಳಿಂದ ಅವರೊಂದಿಗೆ ಆಡುತ್ತಿರುವ ಕಾರಣ ನನ್ನಿಂದ ಸಾಕಷ್ಟು ಅದ್ಭುತಗಳು ಸಂಭವಿಸಿದೆ ಎಂದು ಸುಂದರ್ ಹೇಳಿಕೊಂಡಿದ್ದಾರೆ.

"ನಾನು ವಿರಾಟ್ ಕೊಹ್ಲಿಯನ್ನು ಹತ್ತಿರದಿಂದ ಬಲ್ಲೆ, ಅಂಗಳದ ಒಳಗೆ ಮತ್ತು ಹೊರಗೆ ವಿಭಿನ್ನ ಸಂದರ್ಭಗಳಲ್ಲಿ ಹೇಗೆ ಮುಮದುವರಿಯುತ್ತಾರೆ ಎಂಬುದನ್ನು ನಾನು ಕಂಡಿದ್ದೇನೆ. ಈ ಅವಧಿಯಲ್ಲಿ ಸಾಕಷ್ಟು ಸಂಗತಿಯನ್ನು ನಾನು ಅವರಿಂದ ಕಲಿತುಕೊಂಡಿದ್ದೇನೆ ಎಂದು ವಾಶಿಂಗ್ಟನ್ ಸುಂದರ್ ಹೇಳಿದ್ದಾರೆ.

ಇತ್ತೀಚಿನ ಕೆಲ ತಿಂಗಳುಗಳಲ್ಲಿ ತನ್ನ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಬ್ಯಾಟ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವಲ್ಲಿ ಸುಂದರ್ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಸಿಕ್ಕ ಅವಕಾಶವನ್ನು ವಾಶಿಂಗ್ಟನ್ ಸುಂದರ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಆರ್‌ಸಿಬಿ ಪರವಾಗಿಯೂ ವಾಶಿಂಗ್ಟನ್ ಸುಂದರ್ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಅಭಿಮಾನಿಗಳು ಹೊಂದಿದ್ದಾರೆ.

"ನನಗೆ ಅವರೊಂದಿಗೆ ಆಡುವ ಅವಕಾಶ ದೊರೆತಿದೆ. ಆ ರೀತಿಯ ವ್ಯಕ್ತಿಗಳು ನಮಗೆ ಜೀವನದ ವಿವಿದ ಹಂತಗಳಲ್ಲಿ ಸಹಾಯವನ್ನು ಮಾಡಬಹುದು. ಇದು ಯಾವುದೇ ಕ್ರಿಕೆಟಿಗನಿಂದ ಅತ್ಯುತ್ತಮ ಪ್ರದರ್ಶನವನ್ನು ಪಡೆಯುವಂತೆ ಮಾಡುತ್ತದೆ" ಎಂದು ಸುಂದರ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Story first published: Thursday, April 22, 2021, 16:50 [IST]
Other articles published on Apr 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+