ಪಂಜಾಬ್ ಸೋಲಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ ಚೆನ್ನೈ

ಚೆನ್ನೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಸುಲಭ ಜಯ ಗಳಿಸಿದೆ. ನೀರಸ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್ ಟೂರ್ನಿಯ ಮೊದಲನೇ ಸೋಲು ಅನುಭವಿಸಿದರೆ, ಚೆನ್ನೈ ಮೊದಲ ಜಯ ದಾಖಲಿಸಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನೊಂದಿಗೆ ಕೆಳ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2021ರ ಪಾಯಿಂಟ್ಸ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಮೇಲಿನ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ 7ನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೆ.
ಐಪಿಎಲ್ 202ರ ಐಪಿಎಲ್‌ನ ಪಾಯಿಂಟ್ಸ್ ಟೇಬಲ್
ಚೆನ್ನೈ-ಪಂಜಾಬ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 20 ಓವರ್‌ಗೆ 106 ರನ್ ಗಳಿಸಿತ್ತು. ಆದರೆ ಚೆನ್ನೈ ತಂಡ 15.4 ಓವರ್‌ಗೆ 107 ರನ್ ಬಾರಿಸಿ ಗೆಲುವನ್ನಾಚರಿಸಿತ್ತು. ಹೀಗಾಗಿ ಚೆನ್ನೈ ತಂಡದ ನೆಟ್ ರನ್‌ರೇಟ್‌ನಲ್ಲಿ ಗಮನಾರ್ಹ ಏರಿಕೆಯಾಗಿದೆ. ಚೆನ್ನೈ ಖಾತೆಯಲ್ಲಿ +0.616 ನೆಟ್‌ರನ್‌ರೇಟ್ ಇದೆ.
ಆರ್‌ಸಿಬಿ ತಂಡ ಎರಡರಲ್ಲಿ ಎರಡೂ ಪಂದ್ಯಗಳನ್ನು ಗೆದ್ದು 4 ಪಾಯಿಂಟ್ಸ್ ಕಲೆ ಹಾಕಿ, +0.175 ನೆಟ್ ರನ್‌ರೇಟ್ ಗಳಿಸಿದೆ. ಚೆನ್ನೈ ತಂಡ 2ರಲ್ಲಿ 1 ಪಂದ್ಯ ಗೆದ್ದು 2 ಪಾಯಿಂಟ್ಸ್, +0.616 ರನ್‌ರೇಟ್ ಹೊಂದಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್, 4ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications