For Quick Alerts
ALLOW NOTIFICATIONS  
For Daily Alerts
 

ಅಂಕಪಟ್ಟಿಯಲ್ಲಿ ಮೇಲಕ್ಕೇರಿದ ಚೆನ್ನೈ, ತಳ ಸೇರಿದ ಹೈದರಾಬಾದ್

IPL 2021: Points Table after Chennai Super Kings vs Sunrisers Hyderabad Match

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 28) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 23ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಭರ್ಜರಿ ಜಯ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಋತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಅದ್ಭುತ ಜೊತೆಯಾಟದಿಂದ ಚೆನ್ನೈ ಸತತ 5ನೇ ಜಯ ದಾಖಲಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 6ರಲ್ಲಿ 5 ಪಂದ್ಯ ಗೆದ್ದು 10 ಪಾಯಿಂಟ್ಸ್‌ ಕಲೆ ಹಾಕಿರುವ ಚೆನ್ನೈ +1.475 ನೆಟ್‌ ರನ್‌ರೇಟ್‌ನೊಂದಿಗೆ ನಂ.1 ಸ್ಥಾನಕ್ಕೆ ಗಟ್ಟಿಯಾಗಿದೆ.

ಚೆನ್ನೈ ವಿರುದ್ಧದ ಸೋಲಿನೊಂದಿಗೆ ಹೈದರಾಬಾದ್ ತಂಡ ಆಡಿದ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತಂತಾಗಿದೆ. 2 ಪಾಯಿಂಟ್ಸ್‌, -0.264 ನೆಟ್‌ರನ್‌ರೇಟ್‌ನೊಂದಿಗೆ ಎಸ್‌ಆರ್‌ಎಚ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೇರಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ.

3ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 4ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡಗಳು ಇವೆ. ಚೆನ್ನೈಗೆ ಇನ್ನು ಮೇ 1ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವಿದ್ದರೆ, ಹೈದರಾಬಾದ್‌ಗೆ ಮೇ 2ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯ ನಡೆಯಲಿದೆ.

Story first published: Thursday, April 29, 2021, 9:29 [IST]
Other articles published on Apr 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+