For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಸೋಲಿಸಿ ಕೊನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದ ಕೋಲ್ಕತ್ತಾ

IPL 2021: Points table after Kolkata Knight Riders vs Punjab Kings match

ಅಹ್ಮದಾಬಾದ್‌: ಅಹ್ಮದಾಬಾದ್‌ನ ನರೇಂದ್ರ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 26) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ ಸುಲಭ ಜಯ ಗಳಿಸಿದೆ. ನಾಯಕ ಇಯಾನ್ ಮಾರ್ಗನ್, ರಾಹುಲ್ ತ್ರಿಪಾಠಿ ಬ್ಯಾಟಿಂಗ್‌, ಪ್ರಸಿದ್ಧ್ ಕೃಷ್ಣ ಬೌಲಿಂಗ್‌ ನೆರವಿನೊಂದಿಗೆ ಕೆಕೆಆರ್‌ 2ನೇ ಜಯ ದಾಖಲಿಸಿದೆ.

ಪಂಜಾಬ್ ಕಿಂಗ್ಸ್‌ ವಿರುದ್ಧದ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದೆ. ಸೋತಿರುವ ಪಂಜಾಬ್ 6ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕೋಲ್ಕತ್ತಾ ತಂಡ -0.305 ನೆಟ್ ರನ್‌ರೇಟ್ ಹೊಂದಿದ್ದರೆ, ಪಂಜಾಬ್ -0.608 ನೆಟ್ ರನ್‌ರೇಟ್‌ ಗಳಿಸಿದೆ.

ಅಂಕಪಟ್ಟಿಯಲ್ಲಿ ಸದ್ಯ ಚೆನ್ನೈ, ಡೆಲ್ಲಿ ಮತ್ತು ಬೆಂಗಳೂರು ಕ್ರಮವಾಗಿ ಅಗ್ರ ಮೂರು ಸ್ಥಾನಗಳಲ್ಲಿವೆ. ಕೋಲ್ಕತ್ತಾ ತಂಡಕ್ಕೆ ಇನ್ನು ಏಪ್ರಿಲ್ 29ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವಿದೆ. ಪಂಜಾಬ್‌ ಕಿಂಗ್ಸ್‌ಗೆ ಏಪ್ರಿಲ್ 30ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂದಿನ ಪಂದ್ಯ ನಡೆಯಲಿದೆ. ಇನ್ನುಳಿದ ಪಂದ್ಯಗಳಲ್ಲಿ ಗೆಲ್ಲುತ್ತಾ ಹೋದರೆ ಎರಡೂ ತಂಡಗಳಿಗೆ ಪ್ಲೇಆಫ್ಸ್‌ಗೆ ಪ್ರವೇಶಿಸಲು ಅವಕಾಶವಿದೆ.

ಸೋಮವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌, 20 ಓವರ್‌ಗೆ 9 ವಿಕೆಟ್‌ ಕಳೆದು 123 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, 16.4ನೇ ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 126 ರನ್ ಗಳಿಸಿ ಗೆಲುವಿನ ನಗು ಬೀರಿತು.

Story first published: Tuesday, April 27, 2021, 10:02 [IST]
Other articles published on Apr 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+