
ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 26 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ 34 ರನ್ ಜಯ ದಾಖಲಿಸಿದೆ. ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್, ಹರ್‌ಪ್ರೀತ್ ಬ್ರಾರ್ ಮಾರಕ ಬೌಲಿಂಗ್ ನೆರವಿನೊಂದಿಗೆ ಪಂಜಾಬ್ 3ನೇ ಗೆಲುವು ಕಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್, 20 ಓವರ್‌ಗೆ 5 ವಿಕೆಟ್ ಕಳೆದು 179 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು, 20 ಓವರ್‌ಗೆ ವಿಕೆಟ್ ಕಳೆದು ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಈ ಪಂದ್ಯದ ಜಯದೊಂದಿಗೆ ಪಂಜಾಬ್ ಐಪಿಎಲ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
ಶುಕ್ರವಾರದ ಪಂದ್ಯದಲ್ಲಿ ಬೆಂಳೂರು ತಂಡ 34 ರನ್‌ನಿಂದ ಸೋತಿರುವುದರಿಂದ ಅದರ ನೆಟ್‌ರನ್‌ರೇಟ್‌ಗೆ ಹೊಡೆತ ಬಿದ್ದಿದೆ. ಹಾಗೆ ಪಂಜಾಬ್‌ನ ರನ್‌ರೇಟ್‌ನಲ್ಲಿ ಸುಧಾರಣೆ ಕಾಣಿಸಿದೆ. ಆದರೆ ಆರ್‌ಸಿಬಿ 7ರಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನಕ್ಕೆ ಕುಸಿದಿದೆ.
ಪಂಜಾಬ್ 7ರಲ್ಲಿ 3 ಪಂದ್ಯ ಗೆದ್ದು -0.264 ನೆಟ್ ರನ್‌ರೇಟ್ ಹೊಂದಿದ್ದರೆ, ಬೆಂಗಳೂರು -0.171 ನೆಟ್ ರನ್‌ರೇಟ್ ಹೊಂದಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ದ್ವಿತೀಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೂರನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೆ.