Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಮತ್ತೆ ಅಗ್ರ ಸ್ಥಾನಕ್ಕೇರಿದ ಬೆಂಗಳೂರು

IPL 2021: Points table after Royal Challengers Bangalore vs Delhi Capitals Match

ಅಹ್ಮದಾಬಾದ್‌: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 27) ನಡೆದ ಐಪಿಎಲ್ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್ ರೋಚಕ ಜಯ ಗಳಿಸಿದೆ. ಎಬಿ ಡಿ ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್‌, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಬೌಲಿಂಗ್ ನೆರವಿನಿಂದ ಆರ್‌ಸಿಬಿ 5ನೇ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 171 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್‌ಗೆ 4 ವಿಕೆಟ್ ಕಳೆದು 170 ರನ್ ಗಳಿಸಿ ತಲೆ ಬಾಗಿತು. ಎಬಿಡಿ 42 ಎಸೆತಗಳಲ್ಲಿ 75 ರನ್ ಕೊಡುಗೆ ನೀಡಿ ಪಂದ್ಯ ಗೆಲುವಿನ ಹೀರೋ ಅನ್ನಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿದೆ. ಆರ್‌ಸಿಬಿ ಖಾತೆಯಲ್ಲೀಗ ಒಟ್ಟು 10 ಪಾಯಿಂಟ್ಸ್‌ ಇದೆ. ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೆ.

ಆರ್‌ಸಿಬಿ ಖಾತೆಯಲ್ಲೀಗ 10 ಪಾಯಿಂಟ್ಸ್‌, +0.089 ನೆಟ್‌ ರನ್‌ರೇಟ್ ಇದೆ. ದ್ವಿತೀಯ ಸ್ಥಾನಿ ಚೆನ್ನೈ ಖಾತೆಯಲ್ಲಿ 8 ಪಾಯಿಂಟ್ಸ್‌, +1.612 ನೆಟ್ ರನ್‌ರೇಟ್‌ ಇದೆ. ತೃತೀಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೆ. ಆರ್‌ಸಿಬಿ ಇನ್ನು ಏಪ್ರಿಲ್ 30ರಂದು ಪಂಜಾಬ್ ಕಿಂಗ್ಸ್‌ ವಿರುದ್ಧ ಪಂದ್ಯವಿದೆ.

Story first published: Wednesday, April 28, 2021, 10:29 [IST]
Other articles published on Apr 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+