Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್

IPL 2021 Points Table after Sunrisers Hyderabad vs Mumbai Indians match

ಚೆನ್ನೈ: ಶನಿವಾರ (ಏಪ್ರಿಲ್ 17) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 9ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 13 ರನ್ ಜಯ ಗಳಿಸಿದೆ. ರಾಹುಲ್ ಚಾಹರ್, ಟ್ರೆಂಟ್‌ ಬೌಲ್ಟ್ ಬೌಲಿಂಗ್, ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‌ ನೆರವಿನೊಂದಿಗೆ ಹಾಲಿ ಚಾಂಪಿಯನ್ಸ್ ಮುಂಬೈ ಟೂರ್ನಿಯ 2ನೇ ಗೆಲುವು ದಾಖಲಿಸಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನೊಂದಿಗೆ ರೋಹಿತ್ ಶರ್ಮಾ ಪಡೆ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ. ಆಡಿರುವ 3 ಪಂದ್ಯಗಳಲ್ಲಿ ಎಂಐ 2ರಲ್ಲಿ ಗೆದ್ದು, 1ರಲ್ಲಿ ಸೋತು 4 ಪಾಯಿಂಟ್ಸ್‌ ಕಲೆ ಹಾಕಿದೆ. ಮುಂಬೈ ತಂಡ +0.367 ನೆಟ್ ರನ್‌ರೇಟ್ ಗಳಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು 4 ಪಾಯಿಂಟ್ಸ್ ಕಲೆ ಹಾಕಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆರ್‌ಸಿಬಿ ಖಾತೆಯಲ್ಲಿ +0.175 ನೆಟ್ ರನ್ ರೇಟ್‌ ಇದೆ.

ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌, 4ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 5ನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವಿದೆ. ಮೂರರಲ್ಲಿ ಮೂರೂ ಪಂದ್ಯ ಸೋತಿರುವ ಹೈದರಾಬಾದ್ ಕೊನೇ ಸ್ಥಾನದಲ್ಲಿದೆ.

Story first published: Sunday, April 18, 2021, 0:20 [IST]
Other articles published on Apr 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+