ಐಪಿಎಲ್ 2021 ಪಾಯಿಂಟ್ಸ್ ಟೇಬಲ್: ಪ್ಲೇಆಫ್‌ಗೇರಲು ಯಾವ ತಂಡಕ್ಕೆ ಎಷ್ಟಿದೆ ಅವಕಾಶ!

ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಗೆಲುವು ಸಾಧಿಸಿದೆ. 7 ವಿಕೆಟ್‌ಗಳ ಅಂತರದ ಈ ಬೃಹತ್ ಗೆಲುವಿನ ಮೂಲಕ ಆರ್‌ಸಿಬಿ ಪ್ಲೇಆಫ್‌ಗೇರಲು ಮತ್ತಷ್ಟು ಸನಿಹಕ್ಕೆ ಬಂದು ನಿಂತಿದೆ. ಆರಂಭದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ಬಳಿಕ ನಾಟಕೀಯವಾಗಿ ಕುಸಿದ ರಾಜಸ್ಥಾನ್ ಈ ಸೋಲಿನೊಂದಿಗೆ ಪ್ಲೇಆಫ್‌ಗೇರುವ ಅವಕಾಶದಿಂದ ಮತ್ತಷ್ಟು ದೂರಕ್ಕೆ ಸರಿದಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ನಂತರ ಸ್ಪೋಟಕ ಆರಂಭವನ್ನು ಪಡೆಯಿತು. ಆರಂಭಿಕ ಆಟಗಾರ ಇವಿನ್ ಲೂಯಿಸ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವನ್ನು ಆಡಿತ್ತು. ನಂತರ 12ನೇ ಓವರ್‌ವರೆಗೂ ರಾಜಸ್ಥಾನ್ ಅತ್ಯಂತ ಸುಸ್ಥಿತಿಯಲ್ಲಿತ್ತು. 200ಕ್ಕೂ ಅಧಿಕ ರನ್‌ಗಳ ಗುರಿಯನ್ನು ನೀಡುವ ಆತ್ಮವಿಶ್ವಾಸದಲ್ಲಿ ತಂಡ ಮುನ್ನುಗ್ಗಿತ್ತು. 11ನೇ ಓವರ್‌ಗಳಾಗುವಷ್ಟರಲ್ಲಿ ಭರ್ತಿ 100 ರನ್‌ಗಳಿಸಿ ಕೇವಲ 1 ವಿಕೆಟ್ ಮಾತ್ರವೇ ಕಳೆದುಕೊಂಡಿತ್ತು. ಆದರೆ ನಂತರ ಆರ್‌ಆರ್ ಎದುರಾಳಿ ಆರ್‌ಸಿಬಿ ಬೌಲರ್‌ಗಳ ದಾಳಿಗೆ ಸಂಪೂರ್ಣ ನಲುಗಿತ್ತು. ಅಂತಿಮವಾಗಿ 20 ಓವರ್ ಮುಗಿಯುವಷ್ಟರಲ್ಲಿ 149 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು.
ಆರ್‌ಆರ್ ತಂಡ ನೀಡಿದ ಈ ಗುರಿಯನ್ನು ಆರ್‌ಸಿಬಿ ಯಾವುದೇ ಆತಂಕಗಳಿಲ್ಲದೆ ತಲುಪುವಲ್ಲಿ ಯಶಸ್ವಿಯಾಗಿತ್ತು. ಆರ್‌ಸಿಬಿ ತಮಡದ ಪರವಾಗಿ ಶ್ರೀಕರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ನೀಡಿದರು. ಮ್ಯಾಕ್ಸ್‌ವೆಲ್ ಈ ಭಾರಿಯ ಐಪಿಎಲ್‌ನಲ್ಲಿ ಮತ್ತೊಂದು ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.

14 ಅಂಕಗಳಿಸಿರುವ ಆರ್‌ಸಿಬಿ
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಿದೆ. ಆಡಿದ 11 ಪಂದ್ಯಗಳ ಪೈಕಿ ವಿರಾಟ್ ಕೊಹ್ಲಿ ಪಡೆ 7 ಗೆಲುವು ಸಾಧಿಸಿದ್ದು 14 ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗಿಂತ ಕೇವಲ 2 ಅಂಕ ಮಾತ್ರವೇ ಹಿಂದಿದೆ. ಆರ್‌ಸಿಬಿ ಮುಂದೆ ಮೂರು ಪಂದ್ಯಗಳಿದ್ದು ಕನಿಷ್ಠ ಒಂದು ಪಂದ್ಯವನ್ನು ಗೆದ್ದರೆ ಪ್ಲೇಆಫ್ ಟಿಕೆಟ್ ಖಚಿತವಾಗುತ್ತದೆ. ಹೀಗಾಗಿ ಈಗ ಆರ್‌ಸಿಬಿ ಟಾಟ್ 2 ತಮಡಗಳ ಪೈಕಿ ಒಂದಾಗಿ ಪ್ಲೇಆಫ್‌ಗೇರುವತ್ತ ಚಿತ್ತ ನೆಟ್ಟಿದೆ. ಈ ಮೂಲಕ ಫೈನಲ್‌ಗೇರುವ ಅವಕಾಶವನ್ನು ಸುಲಭಗೊಳಿಸುವ ಪ್ರಯತ್ನ ಮಾಡಬೇಕಿದೆ.

ರಾಜಸ್ಥಾನ್ ರಾಯಲ್ಸ್ ಕಥೆಯೇನು?
ಆರ್‌ಸಿಬಿ ರೀತಿಯಲ್ಲಿಯೇ ರಾಜಸ್ಥಾನ್ ರಾಯಲ್ಸ್‌ಗೆ ಈ ಸೋಲು ಕೂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಬದಲಾಯಿಸಿಲ್ಲ. ಆದರೆ ಈ ಸೋಲಿನ ಪರಿಣಾಮ ಮಾತ್ರ ಆರ್‌ಆರ್ ತಂಡಕ್ಕೆ ಬಹಳ ದೊಡ್ಡದಾಗಿದೆ. ಐಪಿಎಲ್ ಆರಂಭೀಕ ಟೂರ್ನಿಯ ಚಾಂಪಿಯನ್ ತಂಡ ಯುಎಇನಲ್ಲಿ ನಡೆದ ಸತತ ಮೂರು ಪಂದ್ಯಗಳನ್ನು ಸೋತಿದೆ. ಈ ಮೂಲಕ ಆಡಿದ 11 ಪಂದ್ಯಗಳ ಬಳಿಕ ರಾಜಸ್ಥಾನ್ ಖಾತೆಯಲ್ಲಿ ಈಗ ಇರುವುದು ಕೇವಲ 8 ಅಂಕಗಳು ಮಾತ್ರ. ತಂಡದ ನೆಟ್‌ರನ್‌ರೇಟ್ ಕೂಡ -0.468ಕ್ಕೆ ಕುಸಿದಿದೆ.
ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್

ಆರ್‌ಆರ್ ಮುಂದೆ ಅಸಾಧ್ಯ ಸವಾಲು
ಈ ಮಧ್ಯೆ ಕೊಲ್ಕತ್ತಾ ನೈಟ್ ರೈಡರ್ಸ್ ಯುಎಇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಾ 11 ಪಂದ್ಯಗಳಲ್ಲಿ 10 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದು ಮುಂಬೈ ಇಂಡಿಯನ್ಸ್ ಕೂಡ ಇಷ್ಟೇ ಪಂದ್ಯಗಳಲ್ಲಿ11 ಅಂಕಗಳನ್ನು ಗಳಿಸಿ ನೆಟ್‌ರನ್‌ರೇಟ್ ಆಧಾರದಲ್ಲಿ ಐದನೇ ಸ್ಥಾನದಲ್ಲಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಸೋತರು ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಆಫ್ ಕನಸು ಸಂಪೂರ್ಣವಾಗಿ ಭಗ್ನವಾಗಲಿದೆ. ಆದರೆ ಮೂರು ಪಂದ್ಯಗಳನ್ನು ಗೆದ್ದರೂ ಕೂಡ ಆರ್‌ಆರ್ ತಂಡದ ಪ್ಲೇಆಫ್ ಖಚಿತವಾಗಲು ಸಾಧ್ಯವಿಲ್ಲ. ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾನೈಟ್ ರೈಡರ್ಸ್ ತಂಡಗಳ ಫಲಿತಾಂಶ ಕೂಡ ಇಲ್ಲಿ ಆರ್‌ಆರ್ ಮೇಲೆ ಸಾಕಷ್ಟು ಪರಿಣಾಮ ಬೀಳಲಿದೆ. ಅದರಲ್ಲೂ ರಾಜಸ್ಥಾನ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂದಿನ ಸವಾಲು ಸುಲಭದ್ದು ಖಂಡಿತಾ ಅಲ್ಲ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳನ್ನು ಮಣಿಸಬೇಕಿದೆ.
ಆರ್‌ಸಿಬಿ ಹಾಗೂ ಆರ್‌ಆರ್ ತಂಡಗಳ ನಡುವಿನ ಫಲಿತಾಂಶದಿಂದಾಗಿ ಯಾವುದೇ ತಂಡಗಳ ಸ್ಥಾನಗಳ ಪಲ್ಲಟವಾಗಿಲ್ಲ. ಆದರೆ ಆರ್‌ಸಿಬಿ ತಂಡದ ಈ ಗೆಲುವು ಅಗ್ರ ಎರಡು ತಂಡಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಟಿಲ್ಸ್ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದೆ. ಯಾವ ಕ್ಷಣದಲ್ಲಾದರೂ ಆರ್‌ಸಿಬಿ ಅಗ್ರ ಸ್ಥಾನವನ್ನು ಏರುವ ಅವಕಾಶಗಳು ಮುಂದಿನ ಮೂರು ಪಂದ್ಯಗಳಲ್ಲಿ ಇದೆ.

ಕೆಕೆಆರ್, ಎಂಐ ಮಧ್ಯೆ ಜಿದ್ದಾಜಿದ್ದಿನ ಹೋರಾಟ
ಈ ಮಧ್ಯೆ ರಾಜಸ್ಥಾನ್ ರಾಯಲ್ಸ್ ತಂಡ ಆರ್‌ಸಿಬಿ ವಿರುದ್ಧದ ಈ ಪಂದ್ಯವನ್ನು ಸೋತ ಕಾರಣದಿಂದಾಗಿ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಗೆ ಸಣ್ಣ ಸಮಾಧಾನ ಕಂಡಿತಾ ದೊರೆಯಲಿದೆ. ಇದಕ್ಕೆ ಕಾರಣ ಅಂಕಪಟ್ಟಿಯಲ್ಲಿ ಅಗ್ರ ಮೂರು ತಂಡಗಳ ಕೆಳಕ್ಕಿಳಿಯುವುದು ಟಾಪ್ 3 ಸ್ಥಾನ ಬಿಟ್ಟು ಕೆಳಗಿಳಿಯುವ ಸಾಧ್ಯತೆ ತೀರಾ ಕಡಿಮೆಯಿದೆ. ಉಳಿದಿರುವ ಒಂದು ಸ್ಥಾನಕ್ಕಾಗಿ ರಾಜಸ್ಥಾನ್ ಸಹಿತ ಕೆಕೆಆರ್ ಹಾಗೂ ಎಂಐ ಪೈಪೋಟಿಯಲ್ಲಿತ್ತು. ಈ ಸೋಲಿನಿಂದಾಗಿ ಈ ಸ್ಪರ್ಧೆಯಿಂದ ರಾಜಸ್ಥಾನ್ ರಾಯಲ್ಸ್ ಮತ್ತಷ್ಟು ಹಿಂದಕ್ಕೆ ಬಿದ್ದಿದೆ. ಇದನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಯಾವ ರೀತಿಯಾಗಿ ಬಳಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಐಪಿಎಲ್ 2021: ಆರ್‌ಸಿಬಿ ಪರ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್

ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್
ಪರ್ಪಲ್‌ಕ್ಯಾಪ್: ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿತ್ತಿರುವ ಹರ್ಷಲ್ ಪಟೇಲ್ ಪರ್ಪಲ್‌ಕ್ಯಾಪ್ ತಮ್ಮ ಬಳಿಕೇ ಭದ್ರವಾಗಿಟ್ಟುಕೊಂಡಿದ್ದಾರೆ. ಆಡಿದ 11 ಪಂದ್ಯಗಳ ಪೈಕಿ ಹರ್ಷಲ್ ಪಟೇಲ್ 26 ವಿಕೆಟ್ ಕಬಳಿಸಿದ್ದು ಎರಡನೇ ಸ್ಥಾನದಲ್ಲಿರುವ ಆವೇಶ್ ಖಾನ್‌ಗಿಂತ 8 ವಿಕೆಟ್ ಹೆಚ್ಚು ಪಡೆದುಕೊಂಡಿದ್ದಾರೆ. ಅಲ್ಲದೆ ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಡ್ವೇಯ್ನ್ ಬ್ರಾವೋ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ.
ಆರೆಂಜ್‌ಕ್ಯಾಪ್: ಇನ್ನು ಆರೆಂಜ್ ಕ್ಯಾಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಶಿಖರ್ ಧವನ್ ಮುಡಿಗೇರಿದೆ. ಧವನ್ ಸದ್ಯ 454 ರನ್‌ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications