Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಪ್ಲೇ ಆಫ್ಸ್ ಸನಿಹದಲ್ಲಿದೆ ಅಂಕಪಟ್ಟಿಯ ಅಗ್ರಸ್ಥಾನಿ ಡೆಲ್ಲಿ

IPL 2021: Points table Toppers Delhi Capitals near to sealing playoff berth

ದುಬೈ: ಇಂಡಿಯನ್ ಪ್ರೀಯರ್ ಲೀಗ್‌ (ಐಪಿಎಲ್) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶೀಘ್ರವೇ ಪ್ಲೇ ಆಫ್ಸ್ ಪ್ರವೇಶ ಖಾತರಿಪಡಿಸಿಕೊಳ್ಳಲಿದೆ. ಶನಿವಾರ (ಸೆಪ್ಟೆಂಬರ್ 25) ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 33 ರನ್‌ಗಳ ಜಯ ಗಳಿಸಿದ ಬಳಿಕ ಡೆಲ್ಲಿ ಪ್ಲೇ ಆಫ್ಸ್‌ ಸನಿಹದಲ್ಲಿದೆ.

ಶನಿವಾರ ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಿದ್ದವು. ಈ ವೇಳೆ ಡೆಲ್ಲಿ ಜಯ ಗಳಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಂ.1 ಸ್ಥಾನದಲ್ಲಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ 10 ಪಂದ್ಯಗಳಲ್ಲಿ 8 ಜಯ ಗಳಿಸಿ, 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. +0.711 ನೆಟ್‌ ರನ್‌ರೇಟ್‌ ಡೆಲ್ಲಿ ಹೊಂದಿದೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಚೆನ್ನೈ ಗೆದ್ದರೆ ಅಂಕಪಟ್ಟಿಯಲ್ಲಿ ಚೆನ್ನೈ ಮೊದಲ ಸ್ಥಾನಕ್ಕೇರಲಿದೆ. ಯಾಕೆಂದರೆ ಚೆನ್ನೈ ನೆಟ್ ರನ್‌ರೇಟ್ +1.185 ಇದೆ.

ಪಾಯಿಂಟ್ಸ್ ಟೇಬಲ್ ಮಾಹಿತಿ
ಸದ್ಯದ ಐಪಿಎಲ್ ಅಂಕಪಟ್ಟಿಯಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ ಡೆಲ್ಲಿ ನಂ.1 ಸ್ಥಾನಕ್ಕೇರಿದೆ. ಶನಿವಾರ ಡೆಲ್ಲಿ ವಿರುದ್ಧ ಸೋತಿರುವ ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನಕ್ಕೆ ಕುಸಿದಿದೆ. ರಾಜಸ್ಥಾನ್ ತಂಡ ಆಡಿರುವ 9 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 4 ಪಾಯಿಂಟ್ಸ್‌ ಕಲೆ ಹಾಕಿದೆ. ಸನ್ ರೈಸರ್ಸ್ ಹೈದರಾಬಾದ್ ಸೋಲಿಸಿರುವ ಪಂಜಾಬ್ ಕಿಂಗ್ಸ್ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. 10 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಪಂಜಾಬ್ 8 ಪಾಯಿಂಟ್ಸ್ ಕಲೆ ಹಾಕಿದೆ. ಪಂಜಾಬ್ ಎದುರು ಸೋತಿರುವ ಹೈದರಾಬಾದ್ 9ರಲ್ಲಿ 1 ಪಂದ್ಯ ಗೆದ್ದು 2 ಪಾಯಿಂಟ್ಸ್ ಗಳಿಸಿದೆ. ಅಂಕಪಟ್ಟಿಯಲ್ಲಿ ಡೆಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿದೆ. ಚೆನ್ನೈ 9ರಲ್ಲಿ 7 ಪಂದ್ಯಗಳನ್ನು ಗೆದ್ದಿದೆ. ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿವೆ. ಆರ್‌ಸಿಬಿ 9ರಲ್ಲಿ 5 ಪಂದ್ಯಗಳನ್ನು ಗೆದ್ದಿದೆ. 4ನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವಿದೆ. 5ರಲ್ಲಿ ಪಂಜಾಬ್, 6ರಲ್ಲಿ ಮುಂಬೈ ಇಂಡಿಯನ್ಸ್, 7ರಲ್ಲಿ ರಾಜಸ್ಥಾನ್, 8ರಲ್ಲಿ ಹೈದರಾಬಾದ್ ತಂಡಗಳಿವೆ.

ಡೆಲ್ಲಿ vs ರಾಜಸ್ಥಾನ್ ಪಂದ್ಯದ ಸ್ಕೋರ್‌
ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ, ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 10, ಶಿಖರ್ ಧವನ್ 8, ಶ್ರೇಯಸ್ ಐಯ್ಯರ್ 43, ರಿಷಭ್ ಪಂತ್ 24, ಶಿಮ್ರನ್ ಹೆಟ್ಮೈರ್ 28, ಲಲಿತ್ ಯಾದವ್ 14, ಅಕ್ಷರ್ ಪಟೇಲ್ 12, ಆರ್‌ ಅಶ್ವಿನ್ 6 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ಯಶಸ್ವಿ ಜೈಸ್ವಾಲ್ 5, ಸಂಜು ಸ್ಯಾಮ್ಸನ್ 70, ಲಿಯಾಮ್ ಲಿವಿಂಗ್ಸ್ಟೋನ್ 1, ಡೇವಿಡ್ ಮಿಲ್ಲರ್ 7, ಮಹಿಪಾಲ್ ಲೊಮರ್ 19, ರಿಯಾನ್ ಪರಾಗ್ 2, ರಾಹುಲ್ ತೆವಾಟಿಯಾ 9, ತಬ್ರೇಜ್ ಶಮ್ಸಿ 2 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 121 ರನ್ ಗಳಿಸಿತು.

Story first published: Sunday, September 26, 2021, 16:50 [IST]
Other articles published on Sep 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+