'3 ಈಡಿಯಟ್ಸ್'ಗೆ ಐಪಿಎಲ್ ಪಾಯಿಂಟ್ಸ್ ಟೇಬಲ್ ಹೋಲಿಸಿ ತಮಾಷೆ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ರ ಆವೃತ್ತಿ ಸದ್ಯ ಚಾಲ್ತಿಯಲ್ಲಿದೆ. ಈ ಬಾರಿಯ ಪಾಯಿಂಟ್ ಟೇಬಲ್‌ನಲ್ಲಿ ಕಾಣುತ್ತಿರುವ ಪ್ರಮುಖ ಬದಲಾವಣೆ ಏನಂದರೆ ಈವರೆಗೆ ಒಂದೂ ಕಪ್ ಗೆಲ್ಲದ ತಂಡಗಳ ಸಾಲಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಮೂರರಲ್ಲೂ ಗೆಲುವು ಕಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ಸ್ ಟೇಬಲ್‌ನಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆಯುತ್ತಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಹೀಗಾಗಿ ಈ ಸಂಗತಿಯನ್ನು ಮುಂದಿಟ್ಟು ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡಲಾಗಿದೆ.
ಜಾನ್ ಎಂಬವರು ಹಾಕಿಕೊಂಡಿರುವ ಟ್ವಿಟರ್ ವಿಡಿಯೋ ವೈರಲ್ ಆಗಿದೆ. ವಿಡಿಯೋ ಆರಂಭದಲ್ಲಿ 3 ಈಡಿಯಟ್ಸ್ ಪಾತ್ರಧಾರಿಗಳಾದ ರಾಜು ರಾಸ್ಟೊಗಿ (ಶರ್ಮನ್ ಜೋಶಿ) ಮತ್ತು ಫರ್ಹನ್ ಕುರೇಶಿ (ಆರ್ ಮಾಧವನ್) ತನ್ನ ಪರೀಕ್ಷಾ ಫಲಿತಾಂಶವನ್ನು ಪರೀಕ್ಷಿಸುತ್ತಿರುವ ದೃಶ್ಯವನ್ನು ಎಡಿಟ್ ಮಾಡಲಾಗಿದೆ.
ವಿಡಿಯೋದಲ್ಲಿ ಪಾಯಿಂಟ್ಸ್ ಟೇಬಲ್ ಅನ್ನು ರಾಜು ಮತ್ತು ಫರ್ಹಾನ್ ಪರೀಕ್ಷಿಸುತ್ತಾರೆ. ಅಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕೊನೇ ಸ್ಥಾನದಲ್ಲಿರುತ್ತದೆ, ಪಂಜಾಬ್ ಕಿಂಗ್ಸ್ ಕೊನೇಯಲ್ಲಿ 2ನೇ ಸ್ಥಾನದಲ್ಲಿರುತ್ತದೆ. ಹಾಗಾದರೆ ಆರ್‌ಸಿಬಿ ಎಲ್ಲಿ ಎಂದು ಹುಡುಕಾಡುವಾಗ ಆರ್‌ಸಿಬಿ ನಂ.1 ಸ್ಥಾನದಲ್ಲಿ ಅಂದರೆ ನಾಯಕ ರಾಂಚೋ (ಅಮೀರ್ ಖಾನ್) ಸ್ಥಾನದಲ್ಲಿ ಆರ್‌ಸಿಬಿ ಮಿಂಚುತ್ತಿರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications