ಐಪಿಎಲ್ 2021 ನಿಲುಗಡೆಗೆ ನಿಜವಾದ ಕಾರಣ ಬಹಿರಂಗ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಆವೃತ್ತಿ ಕೋವಿಡ್-19 ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತು. ಸುಮಾರು ಅರ್ಧ ಟೂರ್ನಿ ನಡೆದಿದ್ದಾಗ ಐಪಿಎಲ್ ನಾಲ್ಕು ಫ್ರಾಂಚೈಸಿಗಳಲ್ಲಿ ಸೋಂಕಿನ ಪ್ರಕರಣಗಳು ಕಾಣಸಿಕೊಂಡಿದ್ದರಿಂದ ಐಪಿಎಲ್ ನಿಲ್ಲಿಸುವ ನಿರ್ಧಾರಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಅವರಲ್ಲಿ ಕೋವಿಡ್ ಪಾಸಿಟಿವ್ ಇದ್ದಿದ್ದರಿಂದ ಐಪಿಎಲ್ ಅಮಾನತುಗೊಂಡಿತ್ತು.
ಐಪಿಎಲ್ ಬಯೋಬಬಲ್ ಒಳಗೆ ಸೋಂಕು ಹಬ್ಬಲು ಪ್ರಮುಖ ಕಾರಣ ಏನೆಂಬುದು ಈಗ ಬಯಲಾಗಿದೆ. ಬಯೋಬಬಲ್ ಒಳಗೆ ಕಟ್ಟು ನಿಟ್ಟಿನ ಕ್ರಮ ಇಲ್ಲದ್ದು ಒಂದೆಡೆಯಾದರೆ ಜೊತೆಗೆ ಆಟಗಾರರು ಯಾರೂ ಕೋವಿಡ್-19 ವ್ಯಾಕ್ಸಿನ್ ತೆಗೆದುಕೊಳ್ಳದಿದ್ದದ್ದು ಮತ್ತೊಂದು ಕಾರಣವಾಗಿತ್ತು.
'ಆಟಗಾರರಿಗೆ ವ್ಯಾಕ್ಸಿನ್‌ನ ಆಫರ್ ನೀಡಿದಾಗ ಅವರು ನಿರ್ಲಕ್ಷಿಸಿದರು. ಆದರೆ ಅದು ಅವರ ತಪ್ಪಲ್ಲ. ವಾಕ್ಸಿನ್ ಬೆಗೆಗಿನ ಅರಿವಿನ ಕೊರತೆಯಿದ್ದಿದ್ದರಿಂದ ವ್ಯಾಕ್ಸಿನ್ ತೆಗೆದುಕೊಂಡಿರಲಿಲ್ಲ. ಹೀಗಾಗಿ ಸೋಂಕು ಬಯೋಬಬಲ್ ಒಳಗೂ ಪ್ರವೇಶಿಸಿ ಹಬ್ಬತೊಡಗಿತು,' ಎಂದು ಮೂಲವೊಂದು ಮಾಹಿತಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications