ಒಂದೇ ಓವರ್‌ನಲ್ಲಿ 6 ಬೌಂಡರಿ ಚಚ್ಚಿ ದಾಖಲೆ ಬರೆದ ಪೃಥ್ವಿ ಶಾ!

ಅಹ್ಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಒಂದೇ ಓವರ್‌ನಲ್ಲಿ ಸತತ 6 ಬೌಂಡರಿಗಳನ್ನು ಬಾರಿಸಿದ ಅಪರೂಪದ ದಾಖಲೆಗೆ ಶಾ ಕಾರಣರಾಗಿದ್ದಾರೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಶಾ ಈ ಸಾಧನೆ ಮಾಡಿದ್ದಾರೆ.
ಗುರುವಾರ (ಏಪ್ರಿಲ್ 29) ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ಇನ್ನಿಂಗ್ಸ್ ಆರಂಭಿಕ ಓವರ್‌ನಲ್ಲೇ ಪೃಥ್ವಿ ಸಾಲು ಸಾಲಾಗಿ 6 ಫೋರ್‌ಗಳನ್ನು ಬಾರಿಸಿ ಗಮನ ಸೆಳೆದರು.

ಒಂದೇ ಓವರ್‌ನಲ್ಲಿ 6 ಫೋರ್ಸ್
ದೆಹಲಿ ಇನ್ನಿಂಗ್ಸ್‌ನ ಆರಂಭಿಕ ಓವರ್‌ನಲ್ಲಿ ಯುವ ಮಧ್ಯಮ ವೇಗಿ ಶಿವಂ ಮಾವಿ ಎಸೆತಗಳನ್ನು ಪೃಥ್ವಿ ಶಾ ಬೌಂಡರಿಗೆ ಅಟ್ಟತೊಡಗಿದರು. ಓವರ್ ಮುಕ್ತಾಯವಾಗುವಾಗ ಪೃಥ್ವಿ 4, 4, 4, 4, 4, 4 ಹೀಗೆ ಒಟ್ಟಿಗೆ 24 ರನ್ ಬಾರಿಸಿದ್ದರು. ಎಲ್ಲಾ ಎಸೆತಗಳಿಗೂ ಫೋರ್ ಬಾರಿಸಿದ್ದರು. ಆ ಒಂದೇ ಓವರ್‌ನಲ್ಲಿ ಮಾವಿ ಒಟ್ಟಾರೆ 25 ರನ್ (24+1 ವೈಡ್) ನೀಡಿ ಕೆಟ್ಟ ದಾಖಲೆಗೆ ಕಾರಣರಾಗಿದ್ದರು.

ಶಾ ಹೆಸರಿಗೆ ವಿಶೇಷ ದಾಖಲೆ
ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 6 ಬೌಂಡರಿಗಳ ದಾಖಲೆ ಇದೇ ಮೊದಲು ಆಗಿದ್ದಲ್ಲ. ಈ ಮೊದಲೂ ಈ ಸಾಧನೆ ಮಾಡಿದ್ದರು. ಈಗ ಇದೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಅಜಿಂಕ್ಯ ರಹಾನೆ ಅವರು ಒಂದೇ ಓವರ್‌ನಲ್ಲಿ ಸತತ 6 ಫೋರ್ಸ್ ಬಾರಿಸಿದ್ದರು. ಅಂದರೆ ಪೃಥ್ವಿ ಈಗ ಐಪಿಎಲ್‌ನಲ್ಲಿ ಓವರ್ ಒಂದರಲ್ಲಿ 6 ಫೋರ್ಸ್ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಹಿರಿಮೆಗೆ ಪಾತ್ರರಾಗಿದ್ದಾರೆ.

ಐಪಿಎಲ್ ಅತೀ ದುಬಾರಿ ಓವರ್
(ಐಪಿಎಲ್ ಇತಿಹಾಸದಲ್ಲಿ ಅತೀ ದುಬಾರಿ ಎನಿಸಿರುವ ಮೊದಲ ಓವರ್‌ನ ಪಟ್ಟಿ)
* 27 ರನ್, ಅಬು ನೇಚಿಮ್, ಮುಂಬೈ ಇಂಡಿಯನ್ಸ್, vs ಆರ್‌ಸಿಬಿ, ಚೆನ್ನೈ, 2011
* 26 ರನ್, ಹರ್ಭಜನ್ ಸಿಂಗ್, ಮುಂಬೈ ಇಂಡಿಯನ್ಸ್, vs ಕೆಕೆಆರ್, ಚೆನ್ನೈ, 2013
* 25 ರನ್, ಶಿವಂ ಮಾವಿ, ಕೋಲ್ಕತ್ತಾ ನೈಟ್ ರೈಡರ್ಸ್, vs ಡಿಸಿ, ಅಹ್ಮದಾಬಾದ್, 2021 *
* 23 ರನ್, ವರುಣ್ ಆ್ಯರನ್, ರಾಜಸ್ಥಾನ್ ರಾಯಲ್ಸ್, vs ಆರ್‌ಸಿಬಿ, ಬೆಂಗಳೂರು 2019
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications