
ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 12) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ 4 ರನ್ ಜಯ ಗಳಿಸಿದೆ. ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ವೀರೋಚಿತ ಹೋರಾಟದ ಹೊರತಾಗಿಯೂ ರಾಜಸ್ಥಾನ್ ಶರಣಾಗಿದೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್, ನಾಯಕ ಕೆಎಲ್ ರಾಹುಲ್ 91 (50), ಕ್ರಿಸ್ ಗೇಲ್ 40 (28), ದೀಪಕ್ ಹೂಡಾ 64 (28), ಮಯಾಂಕ್ ಅಗರ್ವಾಲ್ 14 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 221 ರನ್ ಬಾರಿಸಿತ್ತು.
ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯದ ಸ್ಕೋರ್‌ಕಾರ್ಡ್
ಪಂಜಾಬ್ ನೀಡಿದ್ದ 222 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‌ನಿಂದ ಮನ್ ವೊಹ್ರ 12, ಸಂಜು ಸ್ಯಾಮ್ಸನ್ 119 (63), ಜೋಸ್ ಬಟ್ಲರ್ 25, ಶಿವಂ ದೂಬೆ 23, ರಿಯನ್ ಪರಾಗ್ 25 ರನ್ ಸೇರಿಸಿದರು. ರಾಜಸ್ಥಾನ್ 20 ಓವರ್‌ಗೆ 7 ವಿಕೆಟ್ ಕಳೆದು 217 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಪಂಜಾಬ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಚೇತನ್ ಸಕರಿಯಾ 3, ಕ್ರಿಸ್ ಮೋರಿಸ್ 2, ರಿಯನ್ ಪರಾಗ್ 1 ವಿಕೆಟ್ ಪಡೆದರೆ, ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಮೊಹಮ್ಮದ್ ಶಮಿ 2, ಜಾಯೆ ರಿಚರ್ಡ್ಸನ್ 1, ಅರ್ಷ್‌ದೀಪ್ ಸಿಂಗ್ 3, ರಿಲೆ ಮೆರಿಡಿತ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠರೆನಿಸಿದರು.