For Quick Alerts
ALLOW NOTIFICATIONS  
For Daily Alerts
 

ಕ್ರಿಸ್ ಗೇಲ್ ಬೆಂಬಲಕ್ಕೆ ನಿಂತ ಪಂಜಾಬ್ ಕಿಂಗ್ಸ್ ಸಹಾಯಕ ಕೋಚ್ ಆಂಡಿ ಫ್ಲವರ್

IPL 2021: Punjab Kings coach Andy Flower backs Chris Gayle

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ವೈಫಲ್ಯ ಈಗ ಚರ್ಚೆಗೆ ಕಾರಣವಾಗಿದೆ. ಬಹುತೇಕ ಎಲ್ಲಾ ಆಟಗಾರರು ಕೂಡ ತಂಡಕ್ಕೆ ರನ್‌ ಕೊಡುಗೆ ನೀಡುವಲ್ಲಿ ವಿಫಲರಾದರು. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕ್ರಿಸ್ ಗೇಲ್ ಕೂಡ ತಂಡಕ್ಕೆ ನೆರವಾಗದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಅಲ್ಲದೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರು ಗೇಲ್ ಈ ಈ ಬಾರಿಯ ಆವೃತ್ತಿಯಲ್ಲಿ ವೈಫಲ್ಯ ಅನುಭವಿಸುತ್ತಿರುವುದನ್ನು ನೋಡಿ ವಿಶ್ರಾಂತಿ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆಂಡಿ ಫ್ಲವರ್ ಕ್ರಿಸ್ ಗೇಲ್ ಅವರಿಂದ ಇನ್ನು ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

"ಕ್ರಿಸ್‌ಗೆ ಸಾಕಷ್ಟು ಅನುಭವವಿದೆ. ಅವರು ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಸುದೀರ್ಘ ಕಾಲದಿಂದ ಭಾರೀ ರನ್ ಗಳಿಸಿದ್ದಾರೆ. ಓರ್ವ ವೇಗಿಗೆ ಬಾರಿಸುವುದರ ಮೂಲಕ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಅವರು ಸುಮ್ಮನೆ ಸುದೀರ್ಘ ಕಾಲ ಸಮಯ ತಲ್ಳುವುದಿಲ್ಲ. ರಶೀದ್ ಖಾನ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಇಂದು ಹೆಚ್ಚು ಕಾಲ ಕ್ರೀಸ್‌ನಲ್ಲಿ ಇರಲು ಸಾಧ್ಯವಾಗಲಿಲ್ಲ" ಎಂದು ಆಂಡಿ ಪ್ಲವರ್ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಯುವ ಆಟಗಾರ ಶಾರೂಖ್ ಖಾನ್ ಪ್ರದರ್ಶನದ ಬಗ್ಗೆ ಆಂಡಿ ಫ್ಲವರ್ ಮೆಚ್ಚುಗೆಯ ಮಾತುಗಳನ್ನು ಆಡಿದರು. "ಶಾರೂಖ್ ಖಾನ್ ಮತ್ತೊಂದು ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ. ಅವರು ಸಾಮಾನ್ಯವಾಗಿ ಆಡುವ ಶೈಲಿಗೆ ಇದು ವಿಭಿನ್ನವಾದ ಇನ್ನಿಂಗ್ಸ್ ಆಗಿತ್ತು. ನಮ್ಮ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಹೊಂದಾಣಿಕೆಯಿಂದ ಆಡಬೇಕಿದೆ" ಎಂದು ಫ್ಲವರ್ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, April 21, 2021, 22:11 [IST]
Other articles published on Apr 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+