Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಪಂಜಾಬ್ ಕಿಂಗ್ಸ್ ನೂತನ ಜೆರ್ಸಿ ಬಿಡುಗಡೆ

IPL 2021: Punjab kings revealed their new jersey

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ಪಂಜಾಬ್ ಕಿಂಗ್ಸ್‌ 2021ರ ಟೂರ್ನಿಗೆ ಸಂಬಂಧಿಸಿ ನೂತನ ಜೆರ್ಸಿ ಬಿಡುಗಡೆ ಮಾಡಿದೆ. ಈ ಸಾರಿ ಜೆರ್ಸಿಯ ಬಣ್ಣ ಗಾಢ ಗುಲಾಬಿ ಬಣ್ಣದ ಬದಲಾಗಿ ಗಾಢ ಕೆಂಪು ಬಣ್ಣವಿದ್ದಂತಿದೆ.

ಮಾರ್ಚ್ 30ರ ಮಂಗಳವಾರ ಟ್ವಿಟರ್‌ನಲ್ಲಿ ನೂತನ ಜೆರ್ಸಿಯ ಚಿತ್ರ ಬಿಡುಗಡೆ ಮಾಡಿರುವ ಪಂಜಾಬ್ ಕಿಂಗ್ಸ್, 'ಕಾದಿದ್ದು ಸಾಕು. ಇಲ್ಲಿ ನಾವು ನಮ್ಮ ನೂತನ ಜೆರ್ಸಿ ಬಹಿರಂಗಗೊಳಿಸುತ್ತಿದ್ದೇವೆ' ಎಂದು ಬರೆದುಕೊಂಡಿದೆ. ಪಂಜಾಬ್‌ನ ನೂತನ ಜೆರ್ಸಿ ಕೊಂಚ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹಳೆ ಜೆರ್ಸಿಯ ರೀತಿಯೇ ಇದೆ.

ಕಿಂಗ್ಸ್‌ XI ಪಂಜಾಬ್‌ನಿಂದ ಪಂಜಾಬ್ ಕಿಂಗ್ಸ್‌ ಎಂದು ಹೆಸರು ಬದಲಾಯಿಸಿಕೊಂಡಿರುವ ಪಂಜಾಬ್‌ನ ನೂತನ ಜೆರ್ಸಿಯ, ಎದೆಯ ಎಡ ಭಾಗದಲ್ಲಿ ಫ್ರಾಂಚೈಸಿಯ ಲೋಗೋ ಇದೆ. ಬಲ ಭಾಗದಲ್ಲಿ ಲೋಟಸ್ ಹರ್ಬಲ್ ಕಂಪನಿಯ ಲೋಗೋ ವಿದೆ. ಎದೆಯ ಭಾಗದಲ್ಲೇ ಕೊಂಚ ಕೆಳಭಾಗದಲ್ಲಿ ಪ್ರಾಯೋಜಕರಾದ 'ಇಬಿಕ್ಸ್ ಕ್ಯಾಶ್‌'ನ ಲೋಗೋ ಇದೆ.

2014ರಲ್ಲೂ ಪಂಜಾಬ್ ಫ್ರಾಂಚೈಸಿ ಇದೇ ರೀತಿಯ ಜೆರ್ಸಿ ಬಿಡುಗಡೆ ಮಾಡಿತ್ತು. ಆದರೆ ಆಗ ಚಿನ್ನದ ಬಣ್ಣದ ರೇಖೆಯ ಬದಲಾಗಿ ಬಿಳಿ ಬಣ್ಣದ ರೇಖೆ ಇತ್ತು ಎಂದೂ ನೆಟ್ಟಿಗರು ಹೇಳುತ್ತಿದ್ದಾರೆ. ಏಪ್ರಿಲ್ 9ರಂದು ಐಪಿಎಲ್ ಆರಂಭಗೊಂಡರೆ ಏಪ್ರಿಲ್ 12ರಂದು ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್‌ ಕಿಂಗ್ಸ್‌ ಸ್ಪರ್ಧಿಸಲಿವೆ.

Story first published: Tuesday, March 30, 2021, 17:36 [IST]
Other articles published on Mar 30, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+