Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಹೈಲೈಟ್ಸ್‌

IPL 2021: Punjab Kings vs Chennai Super Kings, 8th Match, Highlights

ಚೆನ್ನೈ: ವೇಗಿ ದೀಪಕ್ ಚಾಹರ್ ಮಾರಕ ಬೌಲಿಂಗ್‌ನೊಂದಿಗೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 6 ವಿಕೆಟ್ ಸುಲಭ ಜಯ ಗಳಿಸಿದೆ. ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದ ಪಂಜಾಬ್ ಟೂರ್ನಿಯ ಮೊದಲನೇ ಸೋಲು ಅನುಭವಿಸಿದರೆ, ಚೆನ್ನೈ ಮೊದಲ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ ಕಿಂಗ್ಸ್‌ನಿಂದ ಶಾರುಖ್ ಖಾನ್ ಬಿಟ್ಟರೆ ಬೇರೆ ಯಾರಿಂದಲೂ ಗಮನಾರ್ಹ ರನ್ ಬರಲಿಲ್ಲ. ಶಾರುಖ್ ಖಾನ್ 47 (36), ಜಾಯೆ ರಿಚರ್ಡ್ಸನ್ 15, ಕ್ರಿಸ್ ಗೇಲ್ 10, ದೀಪಕ್ ಹೂಡಾ 10, ಕೆಎಲ್ ರಾಹುಲ್ 5, ಮೊಹಮ್ಮದ್ ಶಮಿ 9 ರನ್ ಸೇರಿಸಿದರು.

ಪಂಜಾಬ್ ಕಿಂಗ್ಸ್‌ ತಂಡ 106 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ 107 ರನ್ ಬಾರಿಸಿ ಗೆಲುವನ್ನಾಚರಿಸಿತು.

ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್‌ ಪಂದ್ಯದ ಹೈಲೈಟ್ಸ್‌ ಇಲ್ಲಿದೆ
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ 20 ಓವರ್‌ಗೆ 8 ವಿಕೆಟ್ ಕಳೆದು 106 ರನ್ ಗಳಿಸಿತ್ತು.
* ಪಂಜಾಬ್‌ ಪರ ರನ್ ಸೇರಿಸಿದರು: ಶಾರುಖ್ ಖಾನ್ 47 (36), ಜಾಯೆ ರಿಚರ್ಡ್ಸನ್ 15, ಕ್ರಿಸ್ ಗೇಲ್ 10, ದೀಪಕ್ ಹೂಡಾ 10, ಕೆಎಲ್ ರಾಹುಲ್ 5, ಮೊಹಮ್ಮದ್ ಶಮಿ 9 ರನ್.
* ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ 15.4 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 107 ರನ್ ಗಳಿಸಿ ಜಯಗಳಿಸಿತು.
* ಚೆನ್ನೈ ಪರ ಬ್ಯಾಟಿಂಗ್: ಋತುರಾಜ್ ಗಾಯಕ್ವಾಡ್ 5, ಫಾಪ್ ಡು ಪ್ಲೆಸಿಸ್ 36, ಮೊಯೀನ್ ಅಲಿ 46 (31), ಸುರೇಶ್ ರೈನಾ 8, ಸ್ಯಾಮ್ ಕರನ್ 5 ರನ್‌.
* ಚೆನ್ನೈ ಪರ ಬೆಸ್ಟ್ ಬೌಲಿಂಗ್: ದೀಪಕ್ ಚಾಹರ್ 13 ರನ್‌ಗೆ 4, ಸ್ಯಾಮ್ ಕರನ್ 1, ಮೊಯೀನ್ ಅಲಿ 1, ಡ್ವೇನ್ ಬ್ರಾವೋ 1 ವಿಕೆಟ್
* ಪಂಜಾಬ್‌ನಿಂದ ಬೆಸ್ಟ್ ಬೌಲಿಂಗ್: ಮೊಹಮ್ಮದ್ ಶಮಿ 2, ಅರ್ಷ್‌ದೀಪ್ ಸಿಂಗ್ 1, ಮುರುಗನ್ ಅಶ್ವಿನ್‌ 1 ವಿಕೆಟ್‌.

Story first published: Saturday, April 17, 2021, 8:24 [IST]
Other articles published on Apr 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+