Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಪಂಜಾಬ್ ಕಿಂಗ್ಸ್‌ ಸದೆಬಡಿದ ಚೆನ್ನೈ ಸೂಪರ್ ಕಿಂಗ್ಸ್‌

IPL 2021: Punjab Kings vs Chennai Super Kings, 8th Match, Report

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 16) ಇಂಡಿಯನ್ ಪ್ರೀಮಿಯರ್ ಲೀಗ್‌ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 6 ವಿಕೆಟ್ ಸುಲಭ ಜಯ ಗಳಿಸಿದೆ. ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದ ಪಂಜಾಬ್ ಟೂರ್ನಿಯ ಮೊದಲನೇ ಸೋಲು ಅನುಭವಿಸಿದರೆ, ಚೆನ್ನೈ ಮೊದಲ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ ಕಿಂಗ್ಸ್‌ನಿಂದ ಶಾರುಖ್ ಖಾನ್ ಬಿಟ್ಟರೆ ಬೇರೆ ಯಾರಿಂದಲೂ ಗಮನಾರ್ಹ ರನ್ ಬರಲಿಲ್ಲ. ಶಾರುಖ್ ಖಾನ್ 47 (36), ಜಾಯೆ ರಿಚರ್ಡ್ಸನ್ 15, ಕ್ರಿಸ್ ಗೇಲ್ 10, ದೀಪಕ್ ಹೂಡಾ 10, ಕೆಎಲ್ ರಾಹುಲ್ 5, ಮೊಹಮ್ಮದ್ ಶಮಿ 9 ರನ್ ಸೇರಿಸಿದರು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌, ಋತುರಾಜ್ ಗಾಯಕ್ವಾಡ್ 5, ಫಾಪ್ ಡು ಪ್ಲೆಸಿಸ್ 36, ಮೊಯೀನ್ ಅಲಿ 46 (31), ಸುರೇಶ್ ರೈನಾ 8, ಸ್ಯಾಮ್ ಕರನ್ 5 ರನ್‌ನೊಂದಿಗೆ 15.4 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 107 ರನ್ ಗಳಿಸಿ ಜಯದ ನಗು ಬೀರಿತು.

ಪಂಜಾಬ್ ಇನ್ನಿಂಗ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ದೀಪಕ್ ಚಾಹರ್ 13 ರನ್‌ಗೆ 4 ವಿಕೆಟ್ ಪಡೆದು ಪಾರಮ್ಯ ಮೆರೆದರು. ಇನ್ನು ಸ್ಯಾಮ್ ಕರನ್ 1, ಮೊಯೀನ್ ಅಲಿ 1, ಡ್ವೇನ್ ಬ್ರಾವೋ 1 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 2, ಅರ್ಷ್‌ದೀಪ್ ಸಿಂಗ್ 1, ಮುರುಗನ್ ಅಶ್ವಿನ್‌ 1 ವಿಕೆಟ್‌ನಿಂದ ಗಮನ ಸೆಳೆದರು.

Story first published: Friday, April 16, 2021, 22:44 [IST]
Other articles published on Apr 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+