ಐಪಿಎಲ್: DC vs PBKS, Live: ಶತಕದಂಚಿನಲ್ಲಿ ಎಡವಿದ ಮಯಾಂಕ್

ಅಹ್ಮದಾಬಾದ್: ಎಂದಿನ ನಾಯಕ ಕೆಎಲ್ ರಾಹುಲ್ ಅಸ್ವಸ್ಥರಾಗಿ ತಂಡದಿಂದ ಹೊರಬಿದ್ದಿರುವುದರಿಂದ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಮಯಾಂಕ್ ಅರ್ಗವಾಲ್, ಡೆಲ್ಲಿ ಕ್ಯಾಪಿಟಲ್ಸ್ ಎದುರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮಯಾಂಕ್ ಬ್ಯಾಟಿಂಗ್ ನೆರವಿನೊಂದಿಗೆ ಮೊದಲ ಇನ್ನಿಂಗ್ಸ್ ಪಂಜಾಬ್ 166 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌ನಿಂದ ಆರಂಭಿಕರಾಗಿ ಬಂದಿದ್ದ ಮಯಾಂಕ್ ಅಗರ್ವಾಲ್ 58 ಎಸೆತಗಳಲ್ಲಿ 99 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದೇ ವೇಳೆ ಮಯಾಂಕ್ ಬ್ಯಾಟಿಂದ 8 ಫೋರ್ಸ್, 4 ಸಿಕ್ಸರ್ ಕೂಡ ಸಿಡಿದಿತ್ತು.
ಮಯಾಂಕ್ ಅಲ್ಲದೆ ಪ್ರಭ್‌ಸಿಮ್ರನ್ ಸಿಂಗ್ 12, ಕ್ರಿಸ್ ಗೇಲ್ 13, ಡೇವಿಡ್ ಮಲಾನ್ 26, ಶಾರುಖ್ ಖಾನ್ 4, ಹರ್ಪ್ರೀತ್ ಬ್ರಾರ್ 4, ಕ್ರಿಸ್ ಜೋರ್ಡನ್ 2 ರನ್‌ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 166 ರನ್ ಬಾರಿಸಿ ಎದುರಾಳಿಗೆ 167 ರನ್ ಗುರಿ ನೀಡಿದೆ.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕಾಗಿಸೊ ರಬಾಡ 3, ಆವೇಶ್ ಖಾನ್ 1, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು. ಅಪೆಂಡಿಸಿಟಿಸ್‌ಗೆ ಒಳಗಾಗಿರುವ ರಾಹುಲ್ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications