Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಯಾಂಕ್ ಹೋರಾಟ ವ್ಯರ್ಥ, ಪಂಜಾಬ್ ಎದುರು ಡೆಲ್ಲಿಗೆ ಭರ್ಜರಿ ಜಯ

IPL 2021: Punjab Kings vs Delhi Capitals, 29th Match, Report

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮೇ 2) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ. ಇದರೊಂದಿಗೆ ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್ ಮಾಡಿದ ಹೋರಾಟ ವ್ಯರ್ಥವಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌ನಿಂದ ಆರಂಭಿಕರಾಗಿ ಬಂದಿದ್ದ ಮಯಾಂಕ್ ಅಗರ್ವಾಲ್ 58 ಎಸೆತಗಳಲ್ಲಿ 99 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದೇ ವೇಳೆ ಮಯಾಂಕ್ ಬ್ಯಾಟಿಂದ 8 ಫೋರ್ಸ್, 4 ಸಿಕ್ಸರ್ ಕೂಡ ಸಿಡಿದಿತ್ತು.

ಮಯಾಂಕ್ ಅಲ್ಲದೆ ಪ್ರಭ್‌ಸಿಮ್ರನ್ ಸಿಂಗ್ 12, ಕ್ರಿಸ್ ಗೇಲ್ 13, ಡೇವಿಡ್ ಮಲಾನ್ 26, ಶಾರುಖ್ ಖಾನ್ 4, ಹರ್ಪ್ರೀತ್‌ ಬ್ರಾರ್ 4, ಕ್ರಿಸ್ ಜೋರ್ಡನ್ 2 ರನ್‌ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದು 166 ರನ್ ಬಾರಿಸಿ ಎದುರಾಳಿಗೆ 167 ರನ್ ಗುರಿ ನೀಡಿತ್ತು.

ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 39, ಶಿಖರ್ ಧವನ್ 69, ಸ್ಟೀವ್ ಸ್ಮಿತ್ 24, ರಿಷಭ್ ಪಂತ್ 14, ಶಿಮ್ರನ್ ಹೆಟ್ಮೈಯರ್ 16 ರನ್‌ನೊಂದಿಗೆ 17.4 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 167 ರನ್‌ನೊಂದಿಗೆ ಟೂರ್ನಿಯ 6ನೇ ಜಯ ದಾಖಲಿಸಿದೆ.

ಪಂಜಾಬ್ ಕಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕಾಗಿಸೊ ರಬಾಡ 3, ಆವೇಶ್ ಖಾನ್ 1, ಅಕ್ಷರ್ ಪಟೇಲ್ 1 ವಿಕೆಟ್‌ ಪಡೆದರೆ, ರಿಲೆ ಮೆರಿಡಿತ್ 1, ಕ್ರಿಸ್ ಜೋರ್ಡನ್ 1, ಹರ್ಪ್ರೀತ್‌ ಬ್ರಾರ್ 1 ವಿಕೆಟ್‌ನಿಂದ ಗಮನ ಸೆಳೆದರು.

Story first published: Sunday, May 2, 2021, 23:14 [IST]
Other articles published on May 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+