ರಾಹುಲ್-ಗೇಲ್ ಅಬ್ಬರ, ಆರ್‌ಸಿಬಿಗೆ ಉತ್ತಮ ರನ್ ಗುರಿಯಿತ್ತ ಪಂಜಾಬ್

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಎದುರಾಳಿಗೆ 180 ರನ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್, ನಾಯಕ ಕೆಎಲ್ ರಾಹುಲ್ ಅಜೇಯ 91 (57), ಕ್ರಿಸ್ ಗೇಲ್ 46, ಪ್ರಭ್‌ಸಿಮ್ರನ್ ಸಿಂಗ್ 7, ದೀಪಕ್ ಹೂಡಾ 5, ಹರ್‌ಪ್ರೀತ್ ಬ್ರಾರ್ 25 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 179 ರನ್ ಗಳಿಸಿತು.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಡೇನಿಯಲ್ ಸ್ಯಾಮ್ಸ್ 1, ಕೈಲ್ ಜೇಮಿಸನ್ 2, ಯುಜುವೇಂದ್ರ ಚಾಹಲ್ 1, ಶಹಬಾಝ್ ಅಹ್ಮದ್ 1 ವಿಕೆಟ್‌ನಿಂದ ಗಮನ ಸೆಳೆದರು. ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್4 ಓವರ್ ಎಸೆದರಾದರೂ ಅವರಿಗೆ ವಿಕೆಟ್ ಲಭಿಸಲಿಲ್ಲ.
ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಆಡಿರುವ 6 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು ಐಪಿಎಲ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6ರಲ್ಲಿ 5 ಪಂದ್ಯ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications