
ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 26 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ 34 ರನ್ ಜಯ ದಾಖಲಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಟೂರ್ನಿಯಲ್ಲಿ 2ನೇ ಸೋಲು ಅನುಭವಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್, ನಾಯಕ ಕ್ರಿಸ್ ಗೇಲ್ ಅಜೇಯ 91 (57), ಕ್ರಿಸ್ ಗೇಲ್ 46, ಪ್ರಭ್‌ಸಿಮ್ರನ್ ಸಿಂಗ್ 7, ದೀಪಕ್ ಹೂಡಾ 5, ಹರ್‌ಪ್ರೀತ್ ಬ್ರಾರ್ 25 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 179 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಬೆಂಗಳೂರು, ವಿರಾಟ್ ಕೊಹ್ಲಿ 35, ದೇವದತ್ ಪಡಿಕ್ಕಲ್ 7, ರಜತ್ ಪಾಟಿದಾರ್ 31, ಶಹಬಾಝ್ ಅಹ್ಮದ್ 8, ಕೈಲ್ ಜೇಮಿಸನ್ 16, ಹರ್ಷಲ್ ಪಟೇಲ್ 31 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 145 ರನ್ ಬಾರಿಸಿ
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಡೇನಿಯಲ್ ಸ್ಯಾಮ್ಸ್ 1, ಕೈಲ್ ಜೇಮಿಸನ್ 2, ಯುಜುವೇಂದ್ರ ಚಾಹಲ್ 1, ಶಹಬಾಝ್ ಅಹ್ಮದ್ 1 ವಿಕೆಟ್ ಪಡೆದರೆ, ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಹರ್ಪ್ರೀತ್ ಬ್ರಾರ್ 3, ರವಿ ವಿಷ್ಣೋಯ್ 2, ರಿಲೆ ಮೆರಿಡಿತ್ 1, ಮೊಹಮ್ಮದ್ ಶಮಿ 1, ಕ್ರಿಸ್ ಜೋರ್ಡನ್ 1 ವಿಕೆಟ್‌ನಿಂದ ಗಮನ ಸೆಳೆದರು.