Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಪಂಜಾಬ್ ಕಿಂಗ್ಸ್ ವಿರುದ್ಧ ಮುಗ್ಗರಿಸಿದ ಮುಂಬೈ ಇಂಡಿಯನ್ಸ್

IPL 2021:Punjab Kings win against Mumbai indians by 9 wickets, Match 17, Highlights

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ನೀಡಿದ 132 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆದ್ದು ಬೀಗಿದೆ.

ಮುಂಬೈ ವಿರುದ್ಧ ಗೆದ್ದ ನಂತರ KL Rahul ಹೇಳಿದ್ದು ಒಂದೇ ಮಾತು | Oneindia Kannada

ಮುಂಬೈ ಇಂಡಿಯನ್ಸ್ ನೀಡಿದ ಸವಾಲನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ಗೆ ಉತ್ತಮ ಆರಂಭ ದೊರೆಯಿತು. ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಎಚ್ಚರಿಕೆಯ ಆಟವನ್ನು ಪ್ರದರ್ಶಿಸುತ್ತಾ ಮುನ್ನಿಗ್ಗಿದರು. ಈ ಜೋಡಿ ಮೊದಲ ವಿಕೆಟ್‌ಗೆ 53 ರನ್‌ಗಳ ಜೊತೆಯಾಟವನ್ನು ನೀಡಿದರು. ಈ ಸಂದರ್ಭದಲ್ಲಿ 25ರನ್‌ಗಳಿಸಿದ್ದ ಮಯಾಂಕ್ ಅಗರ್ವಾಲ್ ಅವರನ್ನು ರಾಹುಲ್ ಚಾಹರ್ ಔಟ್ ಮಾಡುವಲ್ಲಿ ಯಶಸ್ವಿಯಾದರು.

ಭರ್ಜರಿ ಗೆಲುವು

ಭರ್ಜರಿ ಗೆಲುವು

ನಾಯಕ ರಾಹುಲ್‌ಗೆ ಅನುಭವಿ ಆಟಗಾರ ಕ್ರಿಸ್ ಗೇಲ್ ಸಾಥ್ ನೀಡಿದರು. ಈ ಇಬ್ಬರು ಆಟಗಾರರು ಅದ್ಭುತವಾಗಿ ಇನ್ನಿಂಗ್ಸ್ ಬೆಳೆಸುತ್ತಾ ಮುನ್ನುಗ್ಗಿದರು. ಚೆನ್ನೈನ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗುವ ಪಿಚ್‌ನಲ್ಲಿ ಎರಡನೇ ವಿಕೆಟ್ ಕಳೆದುಕೊಳ್ಳದಂತೆ ಈ ಜೋಡಿ ನೋಡಿಕೊಂಡಿದ್ದಲ್ಲದೆ, ಇನ್ನೂ 14 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ.

ರಾಹುಲ್ ಗೇಲ್ ಜೊತೆಯಾಟ

ರಾಹುಲ್ ಗೇಲ್ ಜೊತೆಯಾಟ

ಇಂದಿನ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ 52 ಎಸೆತಗಳನ್ನು ಎದುರಿಸಿ ಅಜೇಯ 60 ರನ್‌ಗಳಿಸಿದರು. ಇದರಲ್ಲಿ ಮೂರು ಬೌಂಡರಿ ಹಾಗು ಮೂರು ಸಿಕ್ಸರ್ ಒಳಗೊಂಡಿತ್ತು. ಕ್ರಿಸ್ ಗೇಲ್ 35 ಎಸೆತಗಳನ್ನು ಎದುರಿಸಿ 43 ರನ್‌ ಬಾರಿಸುವಲ್ಲಿ ಯಶಸ್ವಿಯಾದರು.

ಮುಂಬೈ ನೀರಸ ಬ್ಯಾಟಿಂಗ್

ಮುಂಬೈ ನೀರಸ ಬ್ಯಾಟಿಂಗ್

ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ಪರವಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಹೊರತುಪಡಿಸಿದರೆ ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವಿಫಲರಾದರು. ರೋಹಿತ್ ಶರ್ಮಾ ಅವರ 63 ರನ್ ಹಾಗೂ ಸೂರ್ಯಕುಮಾರ್ 33 ರನ್‌ಗಳ ಸಹಾಯದಿಂದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 131 ರನ್‌ಗಳಿಸಿತು.

ಐದನೇ ಸ್ಥಾನಕ್ಕೇರಿದ ಪಂಜಾಬ್

ಐದನೇ ಸ್ಥಾನಕ್ಕೇರಿದ ಪಂಜಾಬ್

ಈ ಗೆಲುವಿನ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿನ ಹಾದಿಗೆ ಮರಳಿದೆ. ಮೊದಲ ಪಂದ್ಯದಲ್ಲಿ ಗೆದ್ದ ನಂತರ ಕೆಎಲ್ ರಾಹುಲ್ ಬಳಗ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಇಳಿದಿತ್ತು. ಈಗ ಐದನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

Story first published: Saturday, April 24, 2021, 9:51 [IST]
Other articles published on Apr 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+