For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕ್ವಾಲಿಫೈಯರ್ 1: ಡಿಸಿ vs ಸಿಎಸ್‌ಕೆ: ಮಹತ್ವದ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟ ಬ್ರಾವೋ ರಾಯುಡು

IPL 2021, Qualifier 1, DC vs CSK, Bravo and Rayudu eye on Milestone

ಐಪಿಎಲ್‌ನಲ್ಲಿ ಇಂದಿನಿಂದ ಪ್ಲೇಆಫ್ ಹಂತದ ಪಂದ್ಯಗಳು ಆರಂಭವಾಗಲಿದೆ. ಲೀಗ್ ಹಂತದ ಟೇಬರ್ ಟಾಪರ್‌ಗಳಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಹೀಗಾಗಿ ಮೊದಲ ಫೈನಲಿಸ್ಟ್ ತಂಡ ಯಾವುದು ಎಂಬ ಪ್ರಶ್ನೆಗೆ ಇಂದೇ ಉತ್ತರ ದೊರೆಯಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ದೊರೆಯಲಿದ್ದು ಮತ್ತೊಂದು ಕ್ವಾಲಿಫೈಯರ್ ಸುತ್ತಿನಲ್ಲಿ ಸೆಣೆಸಾಟ ನಡೆಸಲಿದೆ.

ಕುತೂಹಲಕಾರಿ ಸಂಗತಿಯೆಂದರೆ ಟಾಪ್ ಎರಡು ತಂಡಗಳು ಕೂಡ ತಮ್ಮ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋಲುಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರ್‌ಸಿಬಿ ಕೊನೆಯ ಎಸೆತದಲ್ಲಿ ಸೋಲಿನ ರುಚಿ ತೋರಿಸಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು. ಈ ಮೂಲಕ ಸಿಎಸ್‌ಕೆ ಲೀಗ್ ಹಂತದ ಕೊನೆಯ ಮೂರು ಪಂದ್ಯಗಳಲ್ಲಿಯೂ ಸೋಲು ಕಂಡಂತಾಗಿದೆ. ಈಗ ಕ್ವಾಲಿಫೈರ್‌ನಲ್ಲಿ ಗೆದ್ದು ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಲು ಹಾತೊರೆಯುತ್ತಿದೆ.

ಇನ್ನು ಇಂದಿನ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಕೆಲ ಮಹತ್ವದ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಂಥಾ ಸಂಭಾವ್ಯ ಮೈಲಿಗಲ್ಲುಗಳು ಯಾವುದು? ಮುಂದೆ ಓದಿ..

ಅಂಬಾಟಿ ರಾಯುಡು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಐಪಿಎಲ್‌ನಲ್ಲಿ 4000 ರನ್‌ಗಳ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಇದನ್ನು ಪೂರೈಸಲು ಅವರಿಗೆ ಪೂರೈಸಲು 85 ರನ್‌ಗಳ ಅವಶ್ಯಕತೆಯಿದೆ. ಅಲ್ಲದೆ ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳ ಮೈಲಿಗಲ್ಲಿಗೆ ಮತ್ತು ಮತ್ತು ಟಿ 20 ಕ್ರಿಕೆಟ್ ನಲ್ಲಿ 200 ಸಿಕ್ಸರ್ ಮೈಲಿಗಲ್ಲು ತಲುಪಲು ರಾಯುಡು ಕೇವಲ 1 ಸಿಕ್ಸರ್ ಸಿಡಿಸುವ ಅಗತ್ಯವಿದೆ.

ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್
ಡ್ವೇಯ್ನ್ ಬ್ರಾವೋ: ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ಇಂಡಿನ ಪಂದ್ಯದಲ್ಲಿ ಆಡುವ ಬಳಗಕ್ಕೆ ಆಯ್ಕೆಯಾದರೆ ಇಂದು ಅವರು ಐಪಿಎಲ್‌ನಲ್ಲಿ 150ನೇ ಪಂದ್ಯದಲ್ಲಿ ಕಣಕ್ಕಿಳಿದಂತಾಗುತ್ತದೆ. ವೆಸ್ಟ್ ಇಂಡೀಸ್‌ನ ಈ ಆಟಗಾರ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 550 ವಿಕೆಟ್ ಪಡೆದ ಸಾಧನೆ ಮಾಡಲು 1 ವಿಕೆಟ್‌ನ ಅಗತ್ಯವಿದೆ. ಅಲ್ಲದೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಲು 5 ವಿಕೆಟ್‌ಗಳನ್ನು ಬ್ರಾವೋ ಪಡೆಯಬೇಕಿದೆ.

ಎಂಎಸ್ ಧೋನಿ: ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿರುವ ಧೋನಿ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 7000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರುವ ಸನಿಹದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಸಾಧನೆ ಮಾಡಲು ಇನ್ನು 83 ರನ್ ದೂರದಲ್ಲಿದ್ದಾರೆ.

ಅಕ್ಷರ್ ಪಟೇಲ್: ಡೆಲ್ಲಿ ಕ್ಯಾಪಿಟಲ್ಸ್ ಆಲ್ ರೌಂಡರ್ ಅಕ್ಷರ್ ಪಟೇಲ್ ಐಪಿಎಲ್‌ನಲ್ಲಿ 100 ಪಡೆದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗುವ ತವಕದಲ್ಲಿದ್ದಾರೆ. ಇದಕ್ಕಾಗಿ ಅವರು 5 ವಿಕೆಟ್ ಪಡೆಯುವ ಅಗತ್ಯವಿದೆ. ಅಲ್ಲದೆ ಐಪಿಎಲ್‌ನಲ್ಲಿ 1000 ರನ್ ಪೂರೈಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲು ಅಕ್ಷರ್ ಪಟೇಲ್‌ 61 ರನ್ ಗಳಿಸಬೇಕಿದೆ.

ಚೆನ್ನೈ ವಿರುದ್ಧ ಡೆಲ್ಲಿ ಸಾಧನೆ: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕೊನೆಯ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಈ ಗೆಲುವಿನ ಸರಪಳಿಯನ್ನು ಮುಂದುವರಿಸುವ ವಿಶ್ವಾಸದಲ್ಲಿದೆ ಡೆಲ್ಲಿ.

ಚೆನ್ನೈ ಸೂಪರ್ ಕಿಂಗ್ಸ್: ಈ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದಕ್ಕೂ ಮುನ್ನ 2020ರ ಐಪಿಎಲ್ ಆವೃತ್ತಿಯಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ಸತತ ಮೂರು ಪಂದ್ಯಗಳನ್ನು ಸೋತಿದ್ದರು. ಆ ಪಂದ್ಯ ಕೂಡ ಯುಎಇನಲ್ಲಿಯೇ ನಡೆದಿತ್ತು

ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್
ಆರೆಂಜ್ ಕ್ಯಾಪ್ ಓಟ: ಈ ಬಾರಿ ಐಪಿಎಲ್‌ನಲ್ಲಿ ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರ ಎನಿಸಲು ಸಿಎಸ್‌ಕೆ ತಂಡದ ಋತುರಾಜ್ ಗಾಯಕ್ವಾಟ್‌ಗೆ 94 ರನ್‌ಗಳ ಅವಶ್ಯಕತೆಯಿದ್ದರೆ, ಫಾಫ್ ಡು ಪ್ಲೆಸಿಸ್‌ಗೆ 81 ರನ್‌ಗಳ ಅಗತ್ಯವಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಶಿಖರ್ ಧವನ್‌ಗೆ 83 ರನ್‌ಗಳ ಅವಶ್ಯಕತೆ ಇದೆ.

ಫಾಫ್ ಡು ಪ್ಲೆಸಿಸ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು 7 ಸಿಕ್ಸರ್‌ಗಳ ಅವಶ್ಯಕತೆಯಿದೆ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಟಿ20 ಕ್ರಿಕೆಟ್‌ನಲ್ಲಿ 600 ಬೌಂಡರಿಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು 3 ಬೌಂಡರಿಗಳನ್ನು ಸಿಡಿಸಬೇಕಿದೆ.

ಶಿಖರ್ ಧವನ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಸಿಡಿಸಿದ ಆಟಗಾರನೆನಿಸಲು 2 ಸಿಕ್ಸರ್‌ಗಳ ಅಗತ್ಯವಿದೆ. ಟಿ20 ಕ್ರಿಕೆಟ್ ನಲ್ಲಿ 1000 ಬೌಂಡರಿಗಳಿಸಿದ ಆಟಗಾರ ಎನಿಸಲು ಧವನ್ 15 ಬೌಂಡರಿಗಳಷ್ಟು ದೂರದಲ್ಲಿದ್ದಾರೆ.

ಡೆಲಿ ಕ್ಯಾಪಿಟಲ್ಸ್ ಸ್ಕ್ವಾಡ್: ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಿಮ್ರಾನ್ ಹೆಟ್ಮೇರ್, ರಿಪಾಲ್ ಪಟೇಲ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ, ವಿಷ್ಣು ವಿನೋದ್, ಕುಲ್ವಂತ್ ಖೆಜ್ರೋಲಿಯಾ, ಲಲಿತ್ ಯಾದವ್, ಪ್ರವೀಣ್ ದುಬೆ, ಬೆನ್ ಡ್ವಾರಶುಯಿಸ್, ಟಾಮ್ ಕರನ್, ಲುಕ್ಮನ್ ಮೇರಿವಾಲಾ, ಮಾರ್ಕಸ್ ಸ್ಟೊಯಿನಿಸ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟೀವನ್ ಸ್ಮಿತ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್: ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹಜಲ್‌ವುಡ್, ಸುರೇಶ್ ರೈನಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡಾರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವಿಶ್ರೀನಿವಾಸನ್, ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಡೊಮಿನಿಕ್ ಡ್ರೇಕ್ಸ್, ಭಗತ್ ವರ್ಮ, ಕರ್ಣ್ ಶರ್ಮಾ, ಚೇತೇಶ್ವರ ಪೂಜಾರ

Story first published: Sunday, October 10, 2021, 11:35 [IST]
Other articles published on Oct 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+