Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ 3000 ರನ್‌ಗಳಿಸಿದ ಸ್ಯಾಮ್ಸನ್: ಆರೆಂಜ್ ಕ್ಯಾಪ್ ಮುಡಿಗೇರಿಸಿದ ರಾಜಸ್ಥಾನ್ ನಾಯಕ

IPL 2021: Rajasthan captain Samson completes 3000 IPL runs, takes the orange cap

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅಮೋಘ ಆಟವನ್ನು ಪ್ರದರ್ಶಿಸಿದ್ದಾರೆ. ಸಂಜು ನೀಡಿದ ಈ ಪ್ರದರ್ಶನದಿಂದಾಗಿ ರಾಜಸ್ಥಾನ್ ಉತ್ತಮ ಮೊತ್ತಮ ಗಳಿಸಲು ಸಾಧ್ಯವಾಗಿದೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಮೈಲಿಗಲ್ಲೊಂದನ್ನು ನೆಟ್ಟಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 57 ಎಸೆತಗಳನ್ನು ಎದುರಿಸಿ 82 ರನ್‌ಗಳಿಸಿದರು. ಇದರಲ್ಲಿ ಏಳು ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. 143.86ರ ಸ್ಟ್ರೈಕ್‌ರೇಟ್‌ನಲ್ಲಿ ಸಂಜು ಬ್ಯಾಟ್ ಬೀಸಿದ್ದಾರೆ. ಪ್ರಾರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಸಂಜು ಬಳಿಕ ತಮ್ಮ ರನ್ ವೇಗವನ್ನು ಹೆಚ್ಚಿಸಿದರು.

ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ 3000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಂಡಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಪ್ರಮುಖ ಮೈಲಿಗಲ್ಲನ್ನು ದಾಟಿದ್ದಾರೆ. ಈ ಸಾಧನೆ ಮಾಡಲು ಸಂಜು ಸ್ಯಾಮ್ಸನ್‌ಗೆ 65 ರನ್‌ಗಳ ಅಗತ್ಯವಿತ್ತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲನ್ನು ದಾಟಿದ್ದಾರೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್.

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ:
ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯದೇವ್ ಉನಾದ್ಕಟ್, ಮುಸ್ತಫಿಜುರ್ ರೆಹಮಾನ್
ಬೆಂಚ್: ಕಾರ್ತಿಕ್ ತ್ಯಾಗಿ, ಮನನ್ ವೊಹ್ರಾ, ಶ್ರೇಯಸ್ ಗೋಪಾಲ್, ಕೆಸಿ ಕರಿಯಪ್ಪ, ಗ್ಲೆನ್ ಫಿಲಿಪ್ಸ್, ಶಿವಂ ದುಬೆ, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಜೆರಾಲ್ಡ್ ಕೋಟ್ಜಿ, ಕುಲ್ದಿಪ್ ಯಾದವ್, ಆಕಾಶ್ ಸಿಂಗ್, ತಬ್ರೇಜ್ ಶಮ್ಸಿ, ಡೇವಿಡ್ ಮಿಲ್ಲರ್

ಮಾಡು ಇಲ್ಲವೇ ಮಡಿ ಪಂದ್ಯ ಇದು | Oneindia Kannada

ಸನ್‌ರೈಸರ್ಸ್ ಹೈದರಾಬಾದ್ ಆಡುವ ಬಳಗ:
ಜೇಸನ್ ರಾಯ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
ಬೆಂಚ್: ಡೇವಿಡ್ ವಾರ್ನರ್, ಕೇದಾರ್ ಜಾಧವ್, ಖಲೀಲ್ ಅಹ್ಮದ್, ಶಹಬಾಜ್ ನದೀಮ್, ಮುಜೀಬ್ ಉರ್ ರಹಮಾನ್, ಶ್ರೀವಾತ್ ಗೋಸ್ವಾಮಿ, ಮೊಹಮ್ಮದ್ ನಬಿ, ವಿರಾಟ್ ಸಿಂಗ್, ತುಳಸಿ ತಂಪಿ, ಜಗದೀಶ ಸುಚಿತ್, ಉಮ್ರಾನ್ ಮಲಿಕ್, ಮನೀಶ್ ಪಾಂಡೆ

Story first published: Tuesday, September 28, 2021, 10:14 [IST]
Other articles published on Sep 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+