Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಥಾನ ತೊರೆದ ರಾಜಸ್ಥಾನ್ ರಾಯಲ್ಸ್ ಹೆಡ್ ಕೋಚ್ ಮೆಕ್‌ಡೊನಾಲ್ಡ್

IPL 2021: Rajasthan Royals Head Coach Andrew McDonald Steps Down

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್‌ನ ಮುಖ್ಯ ಕೋಚ್ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. 2021ರ ಐಪಿಎಲ್ ಸೀಸನ್‌ನಲ್ಲಿ ಮೆಕ್‌ಡೊನಾಲ್ಡ್‌ ಕೋಚಿಂಗ್ ಗಮನಾರ್ಹ ಫಲಿತಾಂಶವೇನೂ ತಂದಿರಲಿಲ್ಲ. ಹೀಗಾಗಿ ಮೆಕ್‌ಡೊನಾಲ್ಡ್ ತಮ್ಮ ಸ್ಥಾನ ತೊರೆಯಬೇಕಾಗಿ ಬಂದಿದೆ.

ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ ವರದಿಯ ಪ್ರಕಾರ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ನಿರ್ದೇಶಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಸಂಗಕ್ಕಾರ ಅವರೇ ರಾಜಸ್ಥಾನಕ್ಕೆ ಹೆಡ್‌ ಕೋಚ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ರಾಜಸ್ಥಾನ ತಂಡದ ಸಾಧಾರಣ ಫಲಿತಾಂಶವನ್ನು ಉತ್ತಮದತ್ತ ಕೊಂಡೊಯ್ಯಲು ಸಂಗಕ್ಕಾರ ಜವಾಬ್ದಾರಿ ಹೊರಲಿದ್ದಾರೆ. ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಟ್ರೆವರ್ ಪೆನ್ನೆ ಅವರು ಪ್ರಮುಖ ಸಹ ಕೋಚ್‌ ಆಗಿ ಸಂಗಕ್ಕಾರ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ಫ್ರಾಂಚೈಸಿ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೆಕ್‌ಡೊನಾಲ್ಡ್ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಈಗ ಮೆಕ್ ಡೊನಾಲ್ಡ್ ನ್ಯೂಜಿಲೆಂಡ್‌ನಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಕೋಚಿಂಗ್ ನೀಡುತ್ತ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ ಈ ಬಾರಿಯ ಹರಾಜಿನ ವೇಳೆ ರಾಜಸ್ಥಾನ್ ತಂಡ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಕ್ರಿಸ್ ಮೋರಿಸ್ ಅವರನ್ನು 16.25 ಕೋ.ರೂ. ದಾಖಲೆ ಬೆಲೆಗೆ ಖರೀದಿಸಿತ್ತು.

Story first published: Monday, February 22, 2021, 13:26 [IST]
Other articles published on Feb 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+