ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಬದಲು ರಾಜಸ್ಥಾನ್‌ಗೆ ಬಲಿಷ್ಠ ಆಟಗಾರರು ಎಂಟ್ರಿ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ತಂಡದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇಂಗ್ಲೆಂಡ್ ಪ್ರಮುಖ ಆಟಗಾರರಾದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ ಆಡುತ್ತಿಲ್ಲ. ಅವರ ಬದಲಿಗೆ ಆರ್‌ಆರ್ ಬಲಿಷ್ಠ ಆಟಗಾರರನ್ನು ಹೆಸರಿಸಿದೆ. ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಎವಿನ್ ಲೆವಿಸ್ ಮತ್ತು ವೇಗಿ ಒಶಾನೆ ಥಾಮಸ್ ಅವರನ್ನು ರಾಜಸ್ಥಾನ್ ದ್ವಿತೀಯ ಹಂತಕ್ಕೆ ಹೆಸರಿಸಿದೆ.
ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಯುಎಇಯಲ್ಲಿ ನಡೆಯಲಿವೆ. ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಹಾಗೆ ನಿಲುಗಡೆಯಾಗಿರುವ ನಗದು ಶ್ರೀಮಂತ ಟೂರ್ನಿ ಯುಎಇಯಲ್ಲಿ ಮರು ಆರಂಭಗೊಳ್ಳಲಿದೆ.

ಎವಿನ್ ಲೆವಿಸ್, ಒಶಾನೆ ಥಾಮಸ್ ಸಂಕ್ಷಿಪ್ತ ಮಾಹಿತಿ
ಟ್ರಿನಿಡಾಡ್ ಮತ್ತು ಟಬಾಗೊ ಎಡಗೈ ಬ್ಯಾಟ್ಸ್‌ಮನ್ ಎವಿನ್ ಲೆವಿಸ್ ಅವರು ಜೋಸ್ ಬಟ್ಲರ್ ಬದಲಾಗಿ ಆಡಲಿದ್ದಾರೆ. ಭಾರತದಲ್ಲಿ 2016ರಲ್ಲಿ ನಡೆದಿದ್ದ ವರ್ಲ್ಡ್ ಟಿ20 ಪಂದ್ಯದ ವೇಳೆ ಪಾದಾರ್ಪಣೆ ಮಾಡಿದ್ದ 29ರ ಹರೆಯದ ಲೆವಿಸ್, 45 ಟಿ20ಐ ಪಂದ್ಯಗಳಲ್ಲಿ 1318 ರನ್ ಗಳಿಸಿದ್ದಾರೆ. 158 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಎವಿನ್ ಲೆವಿಸ್ ಈ ಮೊದಲು ಐಪಿಎಲ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 2018-2019ರಲ್ಲಿ ಎಂಐ ಪರ 16 ಪಂದ್ಯಗಳಲ್ಲಿ ಆಡಿದ್ದ ಲೆವಿಸ್, 430 ರನ ದಾಖಲೆ ಹೊಂದಿದ್ದಾರೆ. ಜಮೈಕಾದ ಬಲಗೈ ವೇಗಿಯಾಗಿರುವ ಒಶಾನೆ ಥಾಮಸ್ ವೆಸ್ಟ್ ಇಂಡೀಸ್ ಪರ 20 ಏಕದಿನ ಪಂದ್ಯಗಳಲ್ಲಿ 27 ವಿಕೆಟ್, 17 ಟಿ20ಐ ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದಾರೆ (ಚಿತ್ರದಲ್ಲಿ ಎವಿನ್ ಲೆವಿಸ್).

27 ದಿನಗಳವರೆಗೆ ದ್ವಿತೀಯ ಹಂತದ ಐಪಿಎಲ್ ಟೂರ್ನಿ
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ (ಚಿತ್ರದಲ್ಲಿ ಇಶಾನೆ ಥಾಮಸ್).

60 ಶೇಕಡಾ ಪ್ರೇಕ್ಷಕರಿಗೆ ಯುಎಇ ಗ್ರೀನ್ ಸಿಗ್ನಲ್
"ಆತಿಥೇಯರಾಗಿ, ಪ್ರೇಕ್ಷರಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡುವುದಕ್ಕೂ ಮುನ್ನ ಯಾವ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂಬುದರ ಕುರಿತು ಅನುಮೋದನೆ ಪಡೆಯಲು ಅಧಿಕಾರಿಗಳೊಂದಿಗೆ ಇಸಿಬಿ ನಿಕಟವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಚರ್ಚಿಸಲಾಗುತ್ತಿರುವ ವಿಚಾರ ಸ್ಟೇಡಿಯಂಗೆ ವೀಕ್ಷಕರ ಪ್ರವೇಶಕ್ಕೆ ಸಂಬಂಧಿಸಿದ್ದಾಗಿದೆ. ನಾವು ಅದನ್ನು ಬಿಸಿಸಿಐ ಹಾಗೂ ಐಸಿಸಿಯೊಂದಿಗೆ ಚರ್ಚಿಸಿ ಅವರ ಪ್ರೇಕ್ಷಕರ ಅಗತ್ಯತೆಗಳನ್ನು ನಿರ್ಣಯಿಸುತ್ತೇವೆ. ಯುಎಇಯಲ್ಲಿರುವ ನಮ್ಮ ವಲಸಿಗರು ಮತ್ತು ಎಮಿರಾಟಿ ಕ್ರೀಡೆಯನ್ನು ಪ್ರೀತಿಸುವ ಅಭಿಮಾನಿಗಳು ಸ್ಟ್ಯಾಂಡ್‌ನಿಂದ ಈ ಕ್ರಮವನ್ನು ವೀಕ್ಷಿಸಬೇಕೆಂದು ನಾವು ಬಯಸುತ್ತಿದ್ದೇವೆ,"ಎಂದು ಉಸ್ಮಾನಿ ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಯುಎಇ ಸರ್ಕಾರ ಐಪಿಎಲ್ ವೇಳೆ 60 ಶೇ. ವೀಕ್ಷಕರಿಗೆ ಸ್ಟೇಡಿಯಂ ಒಳಗೆ ಅನುಮತಿ ನೀಡಲು ಗ್ರೀನ್ ಸಿಗ್ನಲ್ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications