Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ತಂಡದಿಂದ ಸ್ಟೀವ್ ಸ್ಮಿತ್ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್

IPL 2021: Rajasthan Royals release Steve Smith after intense discussion

ಜೈಪುರ್: ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಮಾಜಿ ನಾಯಕ, ಪ್ರಮುಖ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಅವರನ್ನು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 2020ರ ಸೀಸನ್‌ನಲ್ಲಿ ಸ್ಮಿತ್‌ ಆರ್‌ಆರ್ ತಂಡಕ್ಕೆ ನಾಯಕರಾಗಿದ್ದರು.

ತೀವ್ರ ಮಾತುಕತೆ ನಡೆಸಿದ ಬಳಿಕ 2021ರ ಐಪಿಎಲ್‌ ಸೀಸನ್‌ನಲ್ಲಿ ಸ್ಟೀವ್ ಸ್ಮಿತ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದಿರಲು ರಾಜಸ್ಥಾನ ನಿರ್ಧಾರ ತಾಳಿದೆ ಎನ್ನಲಾಗಿದೆ. ಹೀಗಾಗಿ ಜನವರಿ 20ರಂದು ಫ್ರಾಂಚೈಸಿಗಳು ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸುವಾಗ ಅದರಲ್ಲಿ ಸ್ಮಿತ್ ಹೆಸರೂ ಇರಲಿದೆ.

ಈ ಬಗ್ಗೆ ಮಾತನಾಡಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲವೊಂದು, 'ಹೌದು ಸ್ಮಿತ್ ಅವರನ್ನು ಬಿಟ್ಟುಕೊಡಲಾಗಿದೆ. ಪ್ರಾಮಾಣಿಕವಾಗಿ ಹೇಳೋದಾದ್ರೆ ಸ್ಮಿತ್ ಈ ಬಾರಿ ರಾಜಸ್ಥಾನ್‌ನಿಂದ ಹೊರಬೀಳಲಿದ್ದಾರೆ. ಈ ಬಗ್ಗೆ ನಾವು ತುಂಬಾ ಮಾತುಕತೆ ನಡೆಸಿದೆವು. ಬಳಿಕ ಇಂದು ಈ ನಿರ್ಧಾರ ಕೈಗೊಳ್ಳಲಾಗಿದೆ,' ಎಂದಿದೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳೆ ಸ್ಮಿತ್ ಅವರು ದ್ವಿತೀಯ ಟೆಸ್ಟ್‌ನಲ್ಲಿ ಭಾರತದ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಅವರ ಬ್ಯಾಟ್ಸ್‌ಮನ್‌ ಲೈನ್ ಹಾಳುಗೆಡವಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಸ್ಮಿತ್ ಅವರ ಈ ಕಿಡಿಗೇಡಿತನ ಕಾಣುತ್ತಲೇ ರಾಜಸ್ಥಾನ್ ರಾಯಲ್ಸ್ ಸ್ಮಿತ್‌ನನ್ನು ಕೈಬಿಡಲಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

Story first published: Wednesday, January 20, 2021, 19:08 [IST]
Other articles published on Jan 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+