For Quick Alerts
ALLOW NOTIFICATIONS  
For Daily Alerts
 

ರಿಯಾನ್ ಪರಾಗ್ ಅಲ್ಲ 'ರಿಯಾನ್ ಲಿಂಗ'!

IPL 2021 : Rajasthan Royals tweak Riyan Parag’s picture with Lasith Malinga’s hairstyle

ಶ್ರೀಲಂಕಾದ ಲೆಜೆಂಡರಿ ಕ್ರಿಕೆಟಿಗ ಲಸಿತ್ ಮಾಲಿಂಗ ಹಲವಾರು ಕಾರಣಗಳಿಂದ ವಿಶ್ವ ಕ್ರಿಕೆಟ್‍ನಲ್ಲಿ ಪ್ರಸಿದ್ಧಿಯನ್ನು ಹೊಂದಿ ಲೆಜೆಂಡ್ ಆಗಿ ಉಳಿದಿದ್ದಾರೆ. ವಿಶ್ವದಾದ್ಯಂತ ಕ್ರಿಕೆಟ್ ಮೂಲಕ ಒಳ್ಳೆಯ ಹೆಸರು ಮಾಡಿರುವ ಲಸಿತ್ ಮಾಲಿಂಗ ತಮ್ಮ ವಿಭಿನ್ನ ಕೇಶರಾಶಿಯಿಂದ ಆ ಕಾಲಕ್ಕೆ ಎಲ್ಲರ ಗಮನವನ್ನು ಸೆಳೆದಿದ್ದರು. ವಿಭಿನ್ನವಾದ ಗುಂಗುರು ಕೇಶರಾಶಿಯನ್ನು ಹೊಂದಿದ್ದ ಲಸಿತ್ ಮಾಲಿಂಗ ಅವರ ಹೇರ್ ಸ್ಟೈಲನ್ನು ಆಗಿನ ಕಾಲಕ್ಕೆ ಹಲವಾರು ಮಂದಿ ಪ್ರಯತ್ನಿಸಿದ್ದರು. ಲಸಿತ್ ಮಾಲಿಂಗ ಅವರ ಹೇರ್ ಸ್ಟೈಲ್ ಆ ದಿನಗಳಲ್ಲಿ ಟ್ರೆಂಡ್ ಹುಟ್ಟುಹಾಕಿತ್ತು.

ಸದ್ಯ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಪಡೆದುಕೊಂಡಿರುವ ಲಸಿತ್ ಮಾಲಿಂಗ ಅವರ ಹೇರ್ ಸ್ಟೈಲ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ವೈರಲ್ ಆಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ತಂಡದ ಆಟಗಾರನಾದ ರಿಯಾನ್ ಪರಾಗ್ ಫೋಟೋವನ್ನು ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಲಸಿತ್ ಮಾಲಿಂಗ ಅವರ ಹೇರ್ ಸ್ಟೈಲನ್ನು ಹಾಕಿ ಪೋಸ್ಟ್ ಮಾಡಿದೆ.

ಹೀಗೆ ಲಸಿತ್ ಮಾಲಿಂಗ ಅವರ ಹೇರ್ ಸ್ಟೈಲ್ ನಲ್ಲಿ ರಿಯಾನ್ ಪರಾಗ್ ಅವರ ಫೋಟೋವನ್ನು ರಾಜಸ್ಥಾನ್ ರಾಯಲ್ಸ್ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಕೆಲ ಹೊತ್ತಿನಲ್ಲಿಯೇ ವೈರಲ್ ಆಗಿದೆ. ರಾಜಸ್ಥಾನ್ ರಾಯಲ್ಸ್ ಹಾಕಿದ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಹಲವಾರು ಕ್ರೀಡಾಭಿಮಾನಿಗಳು ರಿಯಾನ್ ಪರಾಗ್ ಅವರಿಗೆ ಪರ್ಯಾಯ ಹೆಸರುಗಳನ್ನು ಕಾಮೆಂಟ್ ಮಾಡುವ ಮೂಲಕ ನೀಡಿದ್ದಾರೆ. ಲಸಿತ್ ಪರಾಗ್ , ರಿಯಾನ್ ಲಿಂಗ, ರೆಲಿಂಗ ಹಾಗೂ ರಿಸತ್ ಪರಿಂಗ ಎಂದು ಭಿನ್ನವಿಭಿನ್ನವಾದ ಹೆಸರುಗಳನ್ನು ಕ್ರೀಡಾಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 11 ಎಸೆತಗಳಿಗೆ 3 ಆಕರ್ಷಕ ಸಿಕ್ಸರ್ ಒಳಗೊಂಡಂತೆ 25 ರನ್ ಸಿಡಿಸಿದ್ದರು. ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 2 ರನ್ ಗಳಿಸಿ ಔಟ್ ಆದರೂ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 51 ರನ್ ಗಳಿಸಿದ್ದಾಗ ರನ್ಔಟ್ ಮಾಡುವ ಮೂಲಕ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜಸ್ಥಾನ್ ರಾಯಲ್ಸ್ ತನ್ನ ಮುಂದಿನ ಪಂದ್ಯವನ್ನು ಸೋಮವಾರ ( ಏಪ್ರಿಲ್ 19 ) ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಆಡಲಿದ್ದು ರಿಯಾನ್ ಪರಾಗ್ ಬ್ಯಾಟಿಂಗ್‌ನಲ್ಲಿ ಯಶಸ್ಸಿನ ಹಾದಿಗೆ ಮರಳುತ್ತಾರಾ ಎಂದು ಕಾದು ನೋಡಬೇಕು.

Story first published: Saturday, April 17, 2021, 8:24 [IST]
Other articles published on Apr 17, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+