For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂಜಾಬ್ ವಿರುದ್ಧ ರಾಜಸ್ಥಾನ್‌ಗೆ ರೋಚಕ ಗೆಲುವು

IPL 2021: Rajasthan Royals vs Punjab Kings, Rajasthan Royals won by 2 runs

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್‌ 21) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ರೋಚಕ 2 ರನ್ ಜಯ ಗಳಿಸಿದೆ. ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಅದ್ಭುತ ಜೊತೆಯಾಟದ ಹೊರತಾಗಿಯೂ ಪಂಜಾಬ್ ಗೆಲುವಿನಂಚಿನಲ್ಲಿ ಸೋತಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್, ಎವಿನ್ ಲೆವಿಸ್ 36, ಯಶಸ್ವಿ ಜೈಸ್ವಾಲ್ 49, ಸಂಜು ಸ್ಯಾಮ್ಸನ್ 4, ಲಿಯಾಮ್ ಲಿವಿಂಗ್‌ಸ್ಟೋನ್ 25, ರಿಯಾನ್ ಪರಾಗ್ 4, ಮಹಿಪಾಲ್ ಲೋಮ್ರರ್ 43, ರಾಹುಲ್ ತೆವಾಟಿಯಾ 2, ಕ್ರಿಸ್ ಮೋರಿಸ್ 5, ಚೇತನ್ ಸಕಾರಿಯಾ 7, ಕಾರ್ತಿಕ್ ತ್ಯಾಗಿ 1 ರನ್‌ನೊಂದಿಗೆ 20 ಓವರ್‌ ಎಲ್ಲಾ ವಿಕೆಟ್ ಕಳೆದು 185 ರನ್ ಬಾರಿಸಿತ್ತು.

ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ನಿಂದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಲಭಿಸಿತು. ಕೆಎಲ್ ರಾಹುಲ್ 49 (33), ಮಯಾಂಕ್ ಅಗರ್ವಾಲ್ (43), ಐಡನ್ ಮಾರ್ಕ್ರಮ್ 26, ನಿಕೋಲಸ್ ಪೂರನ್ 32 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್‌ ಕಳೆದು 183 ರನ್ ಗಳಿಸಿ ಶರಣಾಯಿತು.

ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಅರ್ಷದೀಪ್ ಸಿಂಗ್ 32 ರನ್‌ಗೆ 5 ವಿಕೆಟ್, ಮೊಹಮ್ಮದ್ ಶಮಿ 3, ಇಶಾನ್ ಪೊರೆಲ್ 1, ಹರ್ಪ್ರೀತ್‌ ಬ್ರಾರ್ 1 ವಿಕೆಟ್ ಪಡೆದರೆ, ಪಂಜಾಬ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಚೇತನ್ ಸಕಾರಿಯಾ 1, ಕಾರ್ತಿಕ್ ತ್ಯಾಗಿ 2, ರಾಹುಲ್ ತೆವಾಟಿಯಾ 1 ವಿಕೆಟ್‌ ಪಡೆದು ಗಮನ ಸೆಳೆದರು.

ಡೆತ್ ಓವರ್‌ನಲ್ಲಿ ಅದ್ಭುತ ಬೌಲಿಂಗ್‌ ಮೂಲಕ ರಾಜಸ್ಥಾನ್ ಗೆಲುವಿಗೆ ಕಾರಣರಾದ ಕಾರ್ತಿಕ್ ತ್ಯಾಗಿ ಪಂದ್ಯ ಶ್ರೇಷ್ಠರೆನಿಸಿದರು. ಈ ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 9 ಪಂದ್ಯಗಳಲ್ಲಿ ಪಂಜಾಬ್ 3 ಗೆಲುವು, 6 ಸೋಲುಗಳೊಂದಿಗೆ 6 ಪಾಯಿಂಟ್ಸ್ ಕಲೆ ಹಾಕಿದೆ.

ರಾಜಸ್ಥಾನ್ ರಾಯಲ್ಸ್ ತಂಡ 8 ಪಂದ್ಯಗಳಲ್ಲಿ 4 ಗೆಲುವು, 4 ಸೋಲಿನೊಂದಿಗೆ 5ನೇ ಸ್ಥಾನಕ್ಕೇರಿದೆ. ಸದ್ಯ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿವೆ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
ಕೆಎಲ್ ರಾಹುಲ್ (ಡಬ್ಲ್ಯೂ/ಸಿ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಇಶಾನ್ ಪೊರೆಲ್, ಆದಿಲ್ ರಶೀದ್, ಹರ್‌ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಬೆಂಚ್: ಕ್ರಿಸ್ ಗೇಲ್, ನಾಥನ್ ಎಲ್ಲಿಸ್, ಕ್ರಿಸ್ ಜೋರ್ಡನ್, ಜಲಜ್ ಸಕ್ಸೇನಾ, ಮೊಯಿಸ್ ಹೆನ್ರಿಕ್ಸ್, ಪ್ರಭಸಿಮ್ರಾನ್ ಸಿಂಗ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ಸರ್ಫರಾಜ್ ಖಾನ್, ಸೌರಭ್ ಕುಮಾರ್, ಉತ್ಕರ್ಶ್ ಸಿಂಗ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಶಾರುಖ್ ಖಾನ್.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI
ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ಡಬ್ಲ್ಯೂ/ಸಿ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲಾಮ್ರರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ.
ಬೆಂಚ್: ಶಿವಂ ದೂಬೆ, ತಬ್ರೇಜ್ ಶಮ್ಸಿ, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ಡೇವಿಡ್ ಮಿಲ್ಲರ್, ಮನನ್ ವೋಹ್ರಾ, ಕೆಸಿ ಕರಿಯಪ್ಪ, ಗ್ಲೆನ್ ಫಿಲಿಪ್ಸ್, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಕುಲ್ದಿಪ್ ಯಾದವ್, ಆಕಾಶ್ ಸಿಂಗ್.

Story first published: Wednesday, September 22, 2021, 10:05 [IST]
Other articles published on Sep 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+