Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಟ್ಲರ್ ಅಬ್ಬರ, ರಾಜಸ್ಥಾನ್ ವಿರುದ್ಧ ಹೈದರಾಬಾದ್‌ಗೆ ಮತ್ತೆ ಸೋಲು!

IPL 2021: Rajasthan Royals vs Sunrisers Hyderabad, 28th Match, Report

ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್‌ನ ಸೋಲಿನ ಸರಣಿ ಮತ್ತೆ ಮುಂದುವರೆದಿದೆ. ಭಾನುವಾರ (ಮೇ 2) ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 28ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್ 55 ರನ್ ಸೋಲು ಅನುಭವಿಸಿದೆ. ಜೋಸ್ ಬಟ್ಲರ್ ಸ್ಫೋಟಕ ಶತಕದೊಂದಿಗೆ ಆರ್‌ಆರ್‌ 3ನೇ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್‌ನಿಂದ ಜೋಸ್ ಬಟ್ಲರ್ 124 (64), ಯಶಸ್ವಿ ಜೈಸ್ವಾಲ್ 12, ಸಂಜು ಸ್ಯಾಮ್ಸನ್ 48, ರಿಯಾನ್ ಪರಾಗ್ 15, ಡೇವಿಡ್ ಮಿಲ್ಲರ್ 7 ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್‌ ಕಳೆದು 220 ರನ್ ಗಳಿಸಿತ್ತು.

1
50836

ಗುರಿ ಬೆನ್ನಟ್ಟಿದ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್, ಮನೀಶ್ ಪಾಂಡೆ 31, ಜಾನಿ ಬೇರ್ಸ್ಟೋವ್ 30, ವಿಲಿಯಮ್ಸನ್ 20, ವಿಜಯ್ ಶಂಕರ್ 8, ಕೇದಾರ್ ಜಾಧವ್ 19, ಮೊಹಮ್ಮದ್ ನಬಿ 17, ಅಬ್ದುಲ್ ಸಮದ್ 10, ಭುವನೇಶ್ವರ್ ಕುಮಾರ್ 14 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್‌ ನಷ್ಟದಲ್ಲಿ 165 ರನ್ ಗಳಿಸಿತು.

ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ಹೈದರಾಬಾದ್‌ನ ಸಂದೀಪ್ ಶರ್ಮಾ 1, ರಶೀದ್ ಖಾನ್ 1, ವಿಜಯ್ ಶಂಕರ್ 1 ವಿಕೆಟ್‌ ಪಡೆದರೆ, ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಮುಸ್ತಫಿಝುರ್ ರಹ್ಮಾನ್ 3, ಕ್ರಿಸ್ ಮೋರಿಸ್ 3, ಕಾರ್ತಿಕ್ ತ್ಯಾಗಿ 1 ಮತ್ತು ರಾಹುಲ್ ತೆವಾಟಿಯಾ 1 ವಿಕೆಟ್‌ನಿಂದ ಗಮನ ಸೆಳೆದರು. ಜೋಸ್ ಬಟ್ಲರ್ ಪಂದ್ಯಶ್ರೇಷ್ಠರೆನಿಸಿದರು.

Story first published: Sunday, May 2, 2021, 19:56 [IST]
Other articles published on May 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+