ಫೀಲ್ಡಿಂಗ್‌ನಲ್ಲಿ ರವೀಂದ್ರ ಜಡೇಜಾ ನನಗೆ ಸ್ಪೂರ್ತಿ: ಇಮ್ರಾನ್ ತಾಹಿರ್

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಎಲ್ಲಾ ವಿಭಾಗದಲ್ಲೂ ಸಂಪೂರ್ಣ ಮೇಲುಗೈ ಸಾಧಿಸಿತು. ಈ ಪಂದ್ಯದಲ್ಲಿ ಅನುಭವಿ ಆಟಗಾರ ಇಮ್ರಾನ್ ತಾಹಿರ್ ಈ ಪಂದ್ಯದಲ್ಲಿ ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ಮಿಂಚಿದರು.
ಚೆನ್ನೈ ಸೂಪರ್ ಕಿಂಗ್ಸ ತಂಡ ನೀಡಿದ 192 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ವೇಳೆ ಇಮ್ರಾನ್ ತಾಹೀರ್ ಆರ್‌ಸಿಬಿ ಆಟಗಾರ ಕೈಲ್ ಜ್ಯಾಮಿಸನ್ ಅವರನ್ನು ಡೈರೆಕ್ಟ್ ಹಿಟ್ ಮಾಡುವ ಮೂಲಕ ರನೌಟ್ ಮಾಡುವಲ್ಲಿ ಯಶಸ್ವಿಯಾದರು. 42ರ ಹರೆಯದ ಅನುಭವಿ ಆಟಗಾರ ತಾಹಿರ್ ಅವರ ಈ ಫೀಲ್ಡಿಂಗ್ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಗ್ಗೆ ಸ್ವತಃ ಇಮ್ರಾನ್ ತಾಹೀರ್ ಪ್ರತಿಕ್ರಿಯಿಸಿದ್ದಾರೆ.
ನಾನು ನೆಟ್ ಅಭ್ಯಾಸದ ವೇಳೆ ಫಿಲ್ಡಿಂಗ್ ಅಭ್ಯಾಸವನ್ನು ನಡೆಸುತ್ತೇನೆ. ಇದು ವೃತ್ತಿಪರ ಕ್ರಿಕೆಟ್ ಆಗಿರುವ ಕಾರಣ ಯಾರು ಕೂಡ ಫೀಲ್ಡಿಂಗ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಮ್ರಾನ್ ತಾಹಿರ್ ಹೇಳಿದ್ದಾರೆ. ರವೀಂದ್ರ ಜಡೇಜಾ ಜೊತೆಗೆ ಚ್ಯಾಟ್ ಶೋದಲ್ಲಿ ಭಾಗಿಯಾದ ಇಮ್ರಾನ್ ತಾಹಿರ್ ನೀವೇ ನನಗೆ ಸ್ಪೂರ್ತಿ ಎಂದು ಜಡೇಜಾ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ್ದಾರೆ.
"ನೀವು ನಮ್ಮ ತಂಡದಲ್ಲಿದ್ದೀರಿ. ನೀವು ಚೆಂಡಿನೊಂದಿಗೆ ಮಿಂಚಿನಂತೆ ದಾಳಿ ನಡೆಸುತ್ತೀರಿ. ಹಾಗಾಗಿ ನಾನು ಕೂಡ ಮಿಂಚಿನಂತೆ ಫೀಲ್ಡಿಂಗ್‌ನಲ್ಲಿ ಇರುವುದನ್ನ ಬಯಸುತ್ತೇನೆ. ನೀವು ಯುವ ಆಟಗಾರರನ್ನು ಸ್ಪೂರ್ತಿಗೊಳಿಸುತ್ತೀರು ಹಾಗೆಯೇ ನನ್ನನ್ನು ಕೂಡ. ನಿಮ್ಮನ್ನೆಲ್ಲ ನೋಡಿದಾಗ ನಾನು ನನಗೆ ಅವಕಾಶ ಸಿಕ್ಕಾಗೆಲ್ಲಾ ನನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತೇನೆ" ಎಂದು ಇಮ್ರಾನ್ ತಾಹೀರ್ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications