ವಿಚಿತ್ರ ಸಂಭ್ರಮಾಚರಣೆಯಿಂದ ನೆಟ್ಟಿಗರಿಗೆ ಆಹಾರವಾದ ಜಡ್ಡು: ವಿಡಿಯೋ

ಮುಂಬೈ: ಮುಂಬೈಯ ವಾಂಖಡೆ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 45 ರನ್ ಜಯ ಗಳಿಸಿದೆ. ಸಿಎಸ್‌ಕೆ ಟೂರ್ನಿಯ ಎರಡನೇ ಗೆಲುವು ದಾಖಲಿಸುವಲ್ಲಿ ಆಲ್ ರೌಂಡರ್‌ಗಳಾದ ಮೊಯೀನ್ ಅಲಿ ಮತ್ತು ರವೀಂದ್ರ ಜಡೇಜಾ ಪ್ರಮುಖ ಪಾತ್ರ ವಹಿಸಿದ್ದರು.
ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿ 26 ರನ್, 3 ವಿಕೆಟ್, ರವೀಂದ್ರ ಜಡೇಜಾ 8 ರನ್, 2 ವಿಕೆಟ್, 5 ಕ್ಯಾಚ್‌ಗಳನ್ನು ಪಡೆದಿದ್ದರು. ಆದರೆ ಕ್ಯಾಚ್ ಪಡೆದಾಗ ಜಡೇಜಾ ಅವರ ಸಂಭ್ರಮಾಚರಣೆಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವರು ಜಡೇಜಾ ಸಂಭ್ರಮಾಚರಣೆಯನ್ನು ಖುಷಿಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ಇದು ಎಲ್ಲೆ ಮೀರಿದ ಸಂಭ್ರಮಾಚರಣೆ ಎಂದು ತಮಾಷೆ ಮಾಡಿದ್ದಾರೆ. ಜಡೇಜಾ ಸಂಭ್ರಮಾಚರಿಸುತ್ತಿರುವ ವಿಡಿಯೋ ಮುಂದಿಟ್ಟು ಅನೇಕರು ಟ್ವೀಟ್‌ಗಳನ್ನು ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನ ಕೊನೇ ಕ್ಷಣದಲ್ಲಿ ಬೌಲರ್ ಜಯದೇವ್ ಉನಾದ್ಕತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. 17 ಎಸೆತಗಳಲ್ಲಿ 24 ರನ್ ಕೊಡುಗೆ ನೀಡಿದ್ದರು. ಆದರೆ 19.2ನೇ ಓವರ್‌ನಲ್ಲಿ ಉನಾದ್ಕತ್ ಅವರು ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಈ ವೇಳೆ ಜಡೇಜಾ ತಾನು 4 ಕ್ಯಾಚ್ ಪಡೆದಿದ್ದೇನೆ ಎಂಬಂತೆ ಕೈ ಸನ್ನೆ ಮಾಡಿದ್ದರಲ್ಲದೆ ಫೋನ್ ಮಾಡುವ ಸನ್ನೆಯೂ ಮಾಡಿದ್ದರು. ಇದಕ್ಕೆ ನೆಟ್ಟಗರು ಮಿಶ್ರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications