ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ವಿರುದ್ಧದ ಪಂದ್ಯದ ವೇಳೆ ಪಂಜಾಬ್ ಜೊತೆ ಆರ್‌ಸಿಬಿ ಕಿರಿಕ್

IPL 2021: RCB and PBKS exchange hilarious twitter trolls on Maxwells knock

ನಿನ್ನೆ ( ಏಪ್ರಿಲ್ 9 ) 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದ್ದು ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಕಾದಾಟ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. 160 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಕೊನೆಯ ಎಸೆತದಲ್ಲಿ ಜಯದ ನಗೆಬೀರಿತು.

ಆರ್‌ಸಿಬಿ ಪರ ವಿರಾಟ್ ಕೊಹ್ಲಿ , ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿವಿಲಿಯರ್ಸ್ ಉತ್ತಮ ಆಟವನ್ನಾಡಿದರು. 14.25 ಕೋಟಿ ನೀಡಿ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ನಡೆದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಮೊದಲ ಸಿಕ್ಸ್ ಬಾರಿಸಿದ ಕೂಡಲೇ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಕೆರಳಿಸುವ ರೀತಿಯಲ್ಲಿ ಟ್ವೀಟ್ ಮಾಡಿತ್ತು. ರೆಡ್ & ಗೋಲ್ಡ್ ಜೆರ್ಸಿಯಲ್ಲಿ ಮ್ಯಾಕ್ಸ್‌ವೆಲ್ ಮೊದಲ 'ಮ್ಯಾಕ್ಸಿ'ಮಮ್ ಬಾರಿಸಿದ್ದಾರೆ ಮತ್ತು ಅದು ಮೈದಾನದಿಂದಾಚೆ ಹೋಗಿದೆ ಎಂದು ಟ್ವೀಟ್ ಮಾಡಿದ್ದ ಆರ್‌ ಸಿಬಿ ಅದೇ ಟ್ವೀಟ್ ನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಹರಾಜಿನಲ್ಲಿ ಬಿಟ್ಟುಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಪಂಜಾಬ್ ಕಿಂಗ್ಸ್ ತಂಡವನ್ನು ಉಲ್ಲೇಖಿಸಿ ಹೇಳಿತ್ತು.

ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಪ್ರಥಮ ಗೆಲುವು ಸಾಧಿಸಿದ ಆರ್‌ಸಿಬಿಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಪ್ರಥಮ ಗೆಲುವು ಸಾಧಿಸಿದ ಆರ್‌ಸಿಬಿ

ಆರ್‌ಸಿಬಿಯ ಈ ಟ್ವೀಟ್ ಗೆ ಮರುಟ್ವೀಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಕ್ರಿಸ್ ಗೇಲ್, ಕೆಎಲ್ ರಾಹುಲ್, ಮನ್​ದೀಪ್ ಸಿಂಗ್, ಸರ್ಫರಾಜ್ ಖಾನ್ ಮತ್ತು ಮಯಾಂಕ್ ಅಗರ್ವಾಲ್ ರನ್ನು ಬಿಟ್ಟುಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಕೌಂಟರ್ ನೀಡಿತು. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಹೆಸರಿಸಿರುವ ಈ ಆಟಗಾರರನ್ನು ಬಿಟ್ಟುಕೊಟ್ಟಿತ್ತು ಮತ್ತು ಅವರನ್ನು ಪಂಜಾಬ್ ತಂಡ ಖರೀದಿಸಿತ್ತು ಹೀಗಾಗಿ ಆರ್‌ಸಿಬಿ ಮ್ಯಾಕ್ಸ್‌ವೆಲ್ ಕುರಿತು ಪಂಜಾಬ್ ತಂಡದ ಕಾಲನ್ನು ಎಳೆದರೆ , ಪಂಜಾಬ್ ತಂಡ ಆರ್‌ಸಿಬಿ ಬಿಟ್ಟುಕೊಟ್ಟ ಆಟಗಾರರನ್ನು ಹೆಸರಿಸಿ ಆರ್‌ಸಿಬಿಗೆ ಉತ್ತರ ನೀಡಿತು.

ಇಷ್ಟಕ್ಕೆ ಸುಮ್ಮನಾಗದ ಆರ್‌ಸಿಬಿ ಮತ್ತೊಂದು ಟ್ವೀಟ್ ಮಾಡುವ ಮೂಲಕ ಪಂಜಾಬ್ ತಂಡಕ್ಕೆ ಟಕ್ಕರ್ ನೀಡಿತು. ಈ ಬಾರಿ ಪಂಜಾಬ್ ಕಿಂಗ್ಸ್ ಬಳಸುತ್ತಿರುವ ಜೆರ್ಸಿ, ಹೆಲ್ಮೆಟ್ , ಪ್ಯಾಡ್ಸ್ ಮತ್ತು ಲೋಗೋ ಆರ್‌ಸಿಬಿ ತಂಡ ಈ ಹಿಂದೆ ಬಳಸುತ್ತಿದ್ದ ಶೈಲಿಯಲ್ಲಿಯೇ ಇರುವುದರಿಂದ ಈ ವಿಷಯವನ್ನಿಟ್ಟುಕೊಂಡು ನಮ್ಮ ಜೆರ್ಸಿ, ಹೆಲ್ಮೆಟ್, ಪ್ಯಾಡ್ಸ್ ಮತ್ತು ಲೋಗೋವನ್ನು ಕಾಪಿ ಮಾಡಿದ್ದೀರ ಎಂದು ಆರ್‌ಸಿಬಿ ಮತ್ತೊಂದು ಟ್ವೀಟ್ ಮಾಡಿ ಪಂಜಾಬ್ ತಂಡಕ್ಕೆ ಕೌಂಟರ್ ನೀಡಿತು.

Story first published: Saturday, April 10, 2021, 10:07 [IST]
Other articles published on Apr 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X