ಆಲ್‌ಟೈಮ್ ಐಪಿಎಲ್ XI ಹೆಸರಿಸಿದ ಎಬಿ ಡಿವಿಲಿಯರ್ಸ್: ರೈನಾ, ಮಲಿಂಗಾಗೆ ಇಲ್ಲ ಸ್ಥಾನ

ಐಪಿಎಲ್ 2021ರ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು ಎಲ್ಲಾ ತಂಡದ ಆಟಗಾರರು ತಂಡವನ್ನು ಸೇರಿಕೊಂಡು ಅಭ್ಯಾಸವನ್ನು ಆರಂಭಿಸಿದ್ದಾರೆ. ಕೆಲ ಆಟಗಾರರು ತಮ್ಮ ಕ್ವಾರಂಟೈನ್ ಅವಧಿಯನ್ನು ನಿಗದಿಪಡಿಸಿದ ಹೋಟೆಲ್‌ಗಳಲ್ಲಿ ಪೂರೈಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಆಲ್‌ಟೈಮ್ ಐಪಿಎಲ್ XI ಹೆಸರಿಸಿದ್ದಾರೆ.
ಈ ತಂಡ ಸಾಕಷ್ಟು ಕುತೂಹಲಕಾರಿಯಾಗಿದ್ದು ಸ್ವತಃ ಎಬಿ ಡಿವಿಲಿಯರ್ಸ್ ಕೂಡ ಈ ತಂಡದಲ್ಲಿ ಇದ್ದಾರೆ. ಆದರೆ ಮಿಸ್ಟರ್ ಐಪಿಎಲ್ ಎಂಬ ಖ್ಯಾತಿ ಪಡೆದ ಸುರೇಶ್ ರೈನಾ ಹಾಗೂ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿದ ಲಸಿತ್ ಮಲಿಂಗ್ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ.

ಆರಂಭಿಕರಾಗಿ ಸೆಹ್ವಾಗ್-ರೋಹಿತ್
ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ ಎಬಿ ಡಿವಿಲಿಯರ್ಸ್ ಆರಂಭಿಕನಾಗಿ ಡೆಲ್ಲಿ ತಂಡದ ಆಟಗಾರನಾಗಿದ್ದ ವೀರೇಂದ್ರ ಸೆಹ್ವಾಗ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎರಡನೇ ಆರಂಭಿಕನಾಗಿ ರೋಹಿತ್ ಶರ್ಮಾ ಇದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಂಡಿದೆ.

ಮಧ್ಯಮ ಕ್ರಮಾಂಕ
ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ತಂಡದ ನಾಯಕನಿಗೆ ಸ್ಥಾನವನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕಕ್ಕೆ ಎಬಿ ಡಿವಿಲಿಯರ್ಸ್ ಸ್ಥಾನ ನೀಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಸ್ವತಃ ಎಬಿ ಡಿವಿಲಿಯರ್ಸ್ ಇದ್ದು ನಂತರದ ಕ್ರಮಾಂಕಗಳಲ್ಲಿ ಸ್ಟೀವ್ ಸ್ಮಿತ್ ಹಾಗೂ ಕೇನ್ ವಿಲಿಯಮ್ಸನ್‌ಗೆ ಅವಕಾಶ ನಿಡಲಾಗಿದೆ.

ನಾಯಕನಾಗಿ ಎಂಎಸ್ ಧೋನಿ
ಇನ್ನು ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಹಾಗೂ ಬೆನ್ ಸ್ಟೋಕ್ಸ್ ಎಬಿ ಡಿವಿಲಿಯರ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ಎಂಎಸ್ ಧೋನಿ ಎಬಿ ಡಿವಲಿಯರ್ಸ್ ಅವರ ಸಾರ್ವಕಾಲಿಕ ಐಪಿಎಲ್ XI ತಂಡದ ನಾಯಕನಾಗಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಭುವಿ-ಬೂಮ್ರಾ
ಎಬಿ ಡಿವಿಲಿಯರ್ಸ್ ಹೆಸರಿಸಿದ ಬೌಲಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿದ್ದು ವೇಗಿಗಳಾಗಿ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ ಮತ್ತು ಕಗಿಸೋ ರಬಡಾ ತಂಡದಲ್ಲಿದ್ದಾರೆ. ಇನ್ನು ರಶೀದ್ ಖಾನ್ ಪೂರ್ಣ ಕಾಲಿಕ ಸ್ಪಿನ್ನರ್ ಆಗಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications