ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

60-65 ರನ್‌ಗಳ ಸೋಲು ಮತ್ತಷ್ಟು ನೋವುಂಟು ಮಾಡುತ್ತಿತ್ತು: 34 ರನ್‌ಗಳ ಸೋಲಿನ ಬಳಿಕ ಕೊಹ್ಲಿ ಮಾತು

IPL 2021: Virat kohli reaction after defeat against Punjab Kings

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಬಳಗ ಎರಡನೇ ಸೋಲುನ ರುಚಿಯನ್ನು ಕಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣ ಹಿನ್ನೆಡೆ ಅನುಭವಿಸಿದ ವಿರಾಟ್ ಕೊಹ್ಲಿ ನೇತೃತ್ವದ ತಂಡ ಭಾರೀ ಅಂತರದ ಸೋಲು ಕಾಣುವ ಸಂಭವವಿತ್ತು. ಆದರೆ ಅಂತಿಮ ಹಂತದ ಹೋರಾಟದ ಫಲವಾಗಿ ಆ ಸೋಲಿನ ಅಂತರ 34 ರನ್‌ಗಳಿಗೆ ಇಳಿದಿತ್ತು.

ಈ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. 60-65 ರನ್‌ಗಳ ಅಂತರದ ಸೋಲು ಆರ್‌ಸಿಬಿ ತಂಡಕ್ಕೆ ಮತ್ತಷ್ಟು ನೋವನ್ನುಂಟು ಮಾಡುತ್ತಿತ್ತು ಎಂದಿದ್ದಾರೆ. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 34 ಎಸೆತಗಳನ್ನು ಎದುರಿಸಿ 35 ರನ್‌ ಬಾರಿಸಿದ್ದರು. ಉತ್ತಮ ಜೊತೆಯಾಟ ಹಾಗೂ ಸ್ಟ್ರೈಕ್‌ರೇಟ್‌ನಲ್ಲಿ ಹಿನ್ನೆಡೆ ಅನುಭವಿಸಿದ್ದು 180 ರನ್‌ಗಳ ಸೋಲಿಗೆ ಕಾರಂವಾಯಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪಂಜಾಬ್ ಕಿಂಗ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈಲೈಟ್ಸ್‌ಪಂಜಾಬ್ ಕಿಂಗ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈಲೈಟ್ಸ್‌

ಪಂಜಾಬ್ ಬೌಲಿಂಗ್ ಬಗ್ಗೆ ಕೊಹ್ಲಿ ಪ್ರಶಂಸೆ

ಪಂಜಾಬ್ ಬೌಲಿಂಗ್ ಬಗ್ಗೆ ಕೊಹ್ಲಿ ಪ್ರಶಂಸೆ

ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ವಿಶೇಷವಾಗಿ ಪ್ರಶಂಸೆಯ ಮಾತುಗಳನ್ನು ಆಡಿದರು. ರನ್‌ ಬೆನ್ನಟ್ಟುವ ವೇಳೆ ಆರ್‌ಸಿಬಿ ಒಂದು ಹಂತದಲ್ಲಿ 61/1 ರಿಂದ 64/4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಕುಸಿತ ಆರ್‌ಸಿಬಿ ಪಂದ್ಯದಿಂದ ಹೊರಗುಳಿಯುವಂತೆ ಮಾಡಿತ್ತು.

ಹೆಚ್ಚುವರಿ ರನ್ ಬಿಟ್ಟುಕೊಟ್ಟೆವು

ಹೆಚ್ಚುವರಿ ರನ್ ಬಿಟ್ಟುಕೊಟ್ಟೆವು

"ಅವರು ಉತ್ತಮ ಆರಂಭವನ್ನು ಪಡೆದುಕೊಂಡರು. ನಂತರ ನಾವು ಕೂಡ ಉತ್ತಮ ರೀತಿಯಲ್ಲಿ ತಿರುಗಿ ಬಿದ್ದೆವು. ಆದರೆ ಅಂತಿಮ ಹಂತದಲ್ಲಿ ನಾವು 20-25 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟೆವು. 160 ರನ್‌ಗಳನ್ನಾದರೆ ನಾವು ಬೆನ್ನಟ್ಟುವುದು ಸಾಧ್ಯವಿತ್ತು. ಯೋಜನೆಗಳ ಅನುಷ್ಟಾನದ ವಿಚಾರವಾಗಿ ನಾವು ಚರ್ಚೆಯನ್ನು ನಡೆಸಿದ್ದೆವು. ಆದರೆ ಅಂತಿಮ ಹಂತದಲ್ಲಿ ನಮ್ಮ ಕೈಜಾರಿತು" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಮ್ಮ ಮೇಲೆ ಒತ್ತಡವನ್ನು ಹೇರಿದರು

ನಮ್ಮ ಮೇಲೆ ಒತ್ತಡವನ್ನು ಹೇರಿದರು

"ಬ್ಯಾಟಿಂಗ್‌ನಲ್ಲಿ ನಮ್ಮ ಪರವಾದ ಯಾವುದೇ ಸಂಗತಿಗಳು ಇರಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರು ಅತ್ಯುತ್ತಮವಾಗಿ ಬೌಲಿಂಗ್ ನಡೆಸಿದರು. ಒತ್ತಡವನ್ನು ನಿರಂತರವಾಗಿ ನಮ್ಮ ಮೇಲೆ ಹೇರುತ್ತಲೇ ಸಾಗಿದರು. ಆದರೆ ಬ್ಯಾಟ್ಸ್‌ಮನ್ ಆಗಿ ನಾವು ಆರಂಭದಲ್ಲಿ ಇನ್ನೂ ಹೆಚ್ಚಿನ ಪ್ರಯತ್ನವನ್ನು ನಡೆಸಬಹುದಾಗಿತ್ತು" ಎಂದು ಸೋಲಿಗೆ ಕಾರಣವನ್ನು ನೀಡಿದ್ದಾರೆ ವಿರಾಟ್ ಕೊಹ್ಲಿ.

ಅಂಕ ಪಟ್ಟಿಯಲ್ಲಿ ಪಂಜಾಬ್ ಏರಿಕೆ

ಅಂಕ ಪಟ್ಟಿಯಲ್ಲಿ ಪಂಜಾಬ್ ಏರಿಕೆ

ಇನ್ನು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅದ್ಭುತ ಜಯವನ್ನು ಸಾಧಿಸಿದ ಬಳಿಕ ಕೆಎಲ್ ರಾಹುಲ್ ಬಳಗ ಅಂಕಪಟ್ಟಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ. ಆಡಿದ 7 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಬಳಗ ಈಗ 3 ಗೆಲುವು ಸಾಧಿಸಿದ್ದು ಆರು ಅಂಕಗಳೊಂದಿಗೆ 5ನೇ ಸ್ಥಾನವನ್ನು ಅಲಂಕರಿಸಿದೆ. ಈ ಮೂಲಕ ತಮಡದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

Story first published: Saturday, May 1, 2021, 11:15 [IST]
Other articles published on May 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X