ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್‌ಸಿಬಿ!

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲು ಅಪರೂಪದ ಗೆಲುವು ದಾಖಲಿಸಿದೆ. ಐಪಿಎಲ್‌ನಲ್ಲಿ ಚಿಕ್ಕ ಟೋಟಲ್ ಅನ್ನು ಡಿಫೆಂಡ್ ಮಾಡಿ ಗೆದ್ದ ದಾಖಲೆಗೆ ಆರ್‌ಸಿಬಿ ಕಾರಣವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ಈ ಗೆಲುವು ಲಭಿಸಿದೆ. ಇದು ಸುಮಾರು 10 ವರ್ಷಗಳೀಚೆಗೆ ಆರ್‌ಸಿಬಿಗೆ ದೊರೆತ ಅತಿ ವಿರಳ ಜಯಗಳಲ್ಲಿ ಒಂದಾಗಿದೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 14) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 6ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ 6 ರನ್ ಜಯ ಗಳಿಸಿದೆ. ಇದು ಸುಮಾರು 10 ವರ್ಷಗಳ ಬಳಿಕ ಆರ್‌ಸಿಬಿ ಕಡಿಮೆ ಟೋಟಲ್ ಅನ್ನು ಡಿಫೆಂಡ್ ಮಾಡಿ ಗೆದ್ದ ಸಾಧನೆಯಾಗಿದೆ.

ಸೋಲಿನ ಭೀತಿ ಎದುರಿಸಿದ್ದ ಆರ್‌ಸಿಬಿ
ಬುಧವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ, ನಾಯಕ ವಿರಾಟ್ ಕೊಹ್ಲಿ 33, ದೇವದತ್ ಪಡಿಕ್ಕಲ್ 11, ಸಹಬಾಝ್ ಅಹ್ಮದ್ 14, ಗ್ಲೆನ್ ಮ್ಯಾಕ್ಸ್‌ವೆಲ್ 59 (41), ವಾಷಿಂಗ್ಟನ್ ಸುಂದರ್ 8, ಕೈಲ್ ಜೇಮಿಸನ್ 12 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಗಳಿಸಿತ್ತು. ಕಡಿಮೆ ಟೋಟಲ್ ಆಗಿದ್ದರಿಂದ ಆರ್‌ಸಿಬಿ ಸೋಲಿನ ಭೀತಿ ಎದುರಿಸಿತ್ತು.

ಹೋರಾಡಿ ಸೋತ ಹೈದರಾಬಾದ್
ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್‌ನಿಂದ, ನಾಯಕ ಡೇವಿಡ್ ವಾರ್ನರ್ 54 (37), ಮನೀಶ್ ಪಾಂಡೆ 38, ಜೇಸನ್ ಹೋಲ್ಡರ್ 4, ರಶೀದ್ ಖಾನ್ 17 ರನ್ ಸೇರಿಸಿದರು. ಎಸ್‌ಆರ್‌ಎಚ್ 20 ಓವರ್‌ಗೆ 10 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿ 6 ರನ್‌ನಿಂದ ಸೋಲೊಪ್ಪಿಕೊಂಡಿತು.

10 ವರ್ಷಗಳ ಹಿಂದಿನ ಸಾಧನೆ
ಇದಕ್ಕೂ ಮುನ್ನ 2009ರಲ್ಲಿ ಆರ್‌ಸಿಬಿ ಇದೇ ರೀತಿ ಕಡಿಮೆ ಟೋಟಲ್ ಅನ್ನು ಡಿಫೆಂಡ್ ಮಾಡಿ ಗೆದ್ದಿತ್ತು. ಆವತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲ ಇನ್ನಿಂಗ್ಸ್ ಆಡಿದ್ದ ಆರ್‌ಸಿಬಿ 20 ಓವರ್‌ಗೆ 8 ವಿಕೆಟ್ ಕಳೆದು 133 ರನ್ ಗಳಿಸಿತ್ತು. ಆದರೆ ಆರ್‌ಆರ್ 15.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 58 ರನ್ ಬಾರಿಸಿ 75 ರನ್‌ನಿಂದ ಸೋತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications