Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಟೂರ್ನಿ ರದ್ದುಗೊಳಿಸಿದಕ್ಕೆ ಟ್ವಿಟ್ಟರ್‌ನಲ್ಲಿ ಆರ್‌ಸಿಬಿ ಫ್ಯಾನ್ಸ್ ಪ್ರತಿಕ್ರಿಯೆ ನೋಡಿ!

IPL 2021: RCB fans cant keep calm on Twitter as IPL 2021 suspension

14ನೇ ಆವೃತ್ತಿಯ ಐಪಿಎಲ್‌ಗೆ ಕೊರೊನಾ ವೈರಸ್ ಅಡ್ಡಿಯಾಗಿದ್ದು ಸದ್ಯಕ್ಕೆ ಟೂರ್ನಿಯನ್ನು ಅನಿರ್ಷ್ಟಾವಧಿಗೆ ಮುಂದೂಡಲಾಗಿದೆ. ದೇಶಾದ್ಯಂತ ಕೊರೊನಾ ವೈರಸ್‌ನಿಂದಾಗಿ ಕೆಟ್ಟ ಸುದ್ದಿಗಳಿಂದಲೇ ತುಂಬಿರುತ್ತಿದ್ದ ಮಧ್ಯೆ ಕೆಲ ಗಂಟೆಗಳ ಕಾಲ ಕ್ರಿಕೆಟ್ ಅಭಿಮಾನಿಗಳು ತಲ್ಲೀನರಾಗುವಂತೆ ಮಾಡಿತ್ತು ಈ ಟೂರ್ನಿ. ಈಗ ಈ ಟೂರ್ನಿ ಕೂಡ ರದ್ದಾಗಿರುವುದು ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ.

ಈ ಮಧ್ಯೆ ಆರ್‌ಸಿಬಿ ಅಭಿಮಾನಿಗಳು ಮತ್ತಷ್ಟು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ಅತ್ಯುತ್ತಮ ಆರಂಭವನ್ನು ಪಡೆದಿದ್ದ ವಿರಾಟ್ ಕೊಹ್ಲಿ ಬಳಗ ಟೂರ್ನಿಯನ್ನು ಗೆಲ್ಲುವ ವಿಶ್ವಾಸವನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ಸದ್ಯಕ್ಕೆ ಟೂರ್ನಿ ರದ್ದಾಗುವ ಮೂಲಕ ಅಭಿಮಾನಿಗಳು ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಟ್ವಿಟ್ಟರ್‌ನಲ್ಲಿ ಈ ಟೂರ್ನಿ ರದ್ದಾಗಿರುವ ಹಿನ್ನೆಲೆಯಲ್ಲಿ ಬೇಸರದ ಜೊತೆಗೆ ಸಾಕಷ್ಟು ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಆರ್‌ಸಿಬಿ ಅಭಿಮಾನಿಗಳು ತಮ್ಮ ಬೇಸರವನ್ನು ನಾನಾ ತರದ ತಮಾಷೆಯ ಮೆಮೆಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಐಪಿಎಲ್ ಅಭಿಮಾನಿಗಳು ಆರ್‌ಸಿಬಿ ಅಭಿಮಾನಿಗಳ ಪರಿಸ್ಥಿತಿಯನ್ನು ಕಾಲೆಳೆದು ತಮಾಷೆ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಈ ಬಾರಿಯ ಐಪಿಎಲ್‌ನ ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಮಿಂಚಿತ್ತು. ಮೊದಲ ಸುತ್ತಿನ 7 ಪಂದ್ಯಗಳ ಪೈಕಿ ವಿರಾಟ್ ಕೊಹ್ಲಿ ಪಡೆ ಐದು ಗೆಲುವು ಸಾಧಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಕಾಯ್ದುಕೊಳ್ಳುತ್ತಲೇ ಬಂದಿತ್ತು. ಹೀಗಾಗಿ ಈ ಬಾರಿ ಕಳೆದ 13 ಆವೃತ್ತಿಗಳಲ್ಲಿ ಸಾಧ್ಯವಾಗದ ಟ್ರೋಫಿ ಗೆಲ್ಲುವ ಕನಸು ಈ ಬಾರಿ ನನಸಾಗುವ ನಿರೀಕ್ಷೆಯನ್ನು ಆರ್‌ಸಿಬಿ ಅಭಿಮಾನಿಗಳು ಹೊಂದಿದ್ದರು. ಆದರೆ ಟೂರ್ನಿ ಮುಂದೂಡಿಕೆಯಾಗುವ ಮೂಲಕ ಆ ನಿರಾಸೆಯನ್ನು ಅನುಭವಿಸಿದ್ದಾರೆ.

Story first published: Wednesday, May 5, 2021, 10:02 [IST]
Other articles published on May 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+