ಚಪ್ಪಲಿ ಪೋಸ್ಟ್ ಮಾಡಿದ ಆರ್‌ಸಿಬಿ ವಿರುದ್ಧ ಫ್ಯಾನ್ಸ್ ಗರಂ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೀ ಒಂದು ಐಪಿಎಲ್ ತಂಡವಲ್ಲ, ಅಭಿಮಾನಿಗಳ ಪಾಲಿಗೆ ಇದೊಂದು ಎಮೋಷನ್. ಐಪಿಎಲ್ ಇತಿಹಾಸದಲ್ಲಿ ಯಾವ ತಂಡಕ್ಕೂ ಇರದ ದೊಡ್ಡ ಅಭಿಮಾನಿ ಬಳಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೆ. 13 ಐಪಿಎಲ್ ಆವೃತ್ತಿಗಳು ಕಳೆದಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದೇ ಒಂದು ಟ್ರೋಫಿಯನ್ನು ಕೂಡ ಗೆದ್ದಿಲ್ಲ, ಹಾಗಂತ ಅಭಿಮಾನಿ ಬಳಗದಲ್ಲಿ ಕಿಂಚಿತ್ತೂ ವ್ಯತ್ಯಾಸವಾಗಿಯೇ ಇಲ್ಲ. ಇತರೆ ತಂಡಗಳು ಸತತ 2-3 ಪಂದ್ಯಗಳನ್ನು ಸೋತರೆ ಸಾಕು ಸಾಮಾಜಿಕ ಜಾಲತಾಣದಲ್ಲಿ ಆ ತಂಡಗಳ ಅಭಿಮಾನಿಗಳು ಆಟಗಾರರ ವಿರುದ್ಧ ವೈಯಕ್ತಿಕವಾಗಿ ಕಾಲೆಳೆಯಲು ಶುರು ಮಾಡಿಬಿಡುತ್ತಾರೆ.
ಇತರೆ ತಂಡಗಳ ಇಂತಹ ಕೆಲ ಅಭಿಮಾನಿಗಳ ನಡುವೆ ಎಷ್ಟೇ ಸೀಸನ್ ಸೋತರೂ ಈ ಸಲ ಕಪ್ ನಮ್ದೆ ಎನ್ನುತ್ತಾ ಪ್ರತಿಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುವ ಲಾಯಲ್ ಅಭಿಮಾನಿಗಳನ್ನು ಪಡೆದಿರುವ ಆರ್‌ಸಿಬಿ ನಿಜಕ್ಕೂ ತುಂಬಾ ಅದೃಷ್ಟ ಮಾಡಿರುವ ತಂಡ. ಆದರೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಹೌದು ಆರ್‌ಸಿಬಿಯು ತನ್ನ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಆರ್‌ಸಿಬಿ ಹೆಸರಿನ ವಸ್ತ್ರಗಳ ಜೊತೆಗೆ ಆರ್‌ಸಿಬಿ ಹೆಸರಿನಲ್ಲಿ ಚಪ್ಪಲಿಯನ್ನು ಸಹ ಮಾರಾಟ ಮಾಡಲು ಮುಂದಾಗಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್‌ನಲ್ಲಿ ಈ ಪೋಸ್ಟ್ ಮಾಡಿದ್ದು ಅವುಗಳಿಗೆ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಖಾರವಾಗಿ ಪ್ರತಿಕ್ರಿಯಿಸಿರುವ ಕಾಮೆಂಟ್ಸ್ ಮುಂದೆ ಇದೆ ನೋಡಿ..

1. ಈ ರೀತಿ ಕೆಳಮಟ್ಟದ ವ್ಯಾಪಾರ ಮಾಡುವ ಬದಲು ಆಟದ ಕಡೆ ಗಮನ ಕೊಡಿ

2. ಆರ್‌ಸಿಬಿ ಯಾವಾಗಲೂ ಹೃದಯದಲ್ಲಿ ಇರುತ್ತದೆಯೇ ಹೊರತು ಕಾಲಿನ ಕೆಳಗಲ್ಲ

3. ನಿಜವಾದ ಆರ್‌ಸಿಬಿ ಅಭಿಮಾನಿಗಳು ಇಂತಹದ್ದನ್ನು ಬೆಂಬಲಿಸುವುದಿಲ್ಲ ಇದನ್ನು ಇಲ್ಲಿಗೆ ನಿಲ್ಲಿಸಿ

4. ಆರ್‌ಸಿಬಿ ಲೋಗೋವನ್ನು ನಾನು ನನ್ನ ಕಾಲಿನಿಂದ ಮುಟ್ಟಲಾರೆ

5. ದಯವಿಟ್ಟು ಈ ಪೋಸ್ಟ್ ನಿಂದ ಚಪ್ಪಲಿಯನ್ನು ತೆಗೆದು ಹಾಕಿ. ಆರ್‌ಸಿಬಿ ಹೃದಯದಲ್ಲಿದೆ, ಕಾಲಿನಲ್ಲಲ್ಲ

6. ಚಪ್ಪಲಿಗಳ ಮೇಲೆ ಬರೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಸಾಲನ್ನು ದಯವಿಟ್ಟು ತೆಗೆದುಹಾಕಿ
ನೋಡಿದ್ರಲ್ಲ ಇದೇ ತರಹದ ಇನ್ನೂ ನೂರಾರು ಕಾಮೆಂಟ್ಸ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಆರ್‌ಸಿಬಿ ಮೇಲೆ ತಮಗಿರುವ ಗೌರವವನ್ನು ಸೂಚಿಸುತ್ತಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಈ ಕೂಗಿಗೆ ಓಗೊಟ್ಟು ಆರ್‌ಸಿಬಿ ಚಪ್ಪಲಿ ಮಾರಾಟವನ್ನು ಮ್ಯಾನೇಜ್‌ಮೆಂಟ್ ನಿಲ್ಲಿಸುತ್ತಾ ಕಾದುನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications