Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ರದ್ದು, ಕ್ರಿಕೆಟ್ ಅಭಿಮಾನಿಗಳ ತರ ತರ ತಮಾಷೆ ನೋಡಿ..

IPL 2021: RCB Fans Twitter Reactions after this season IPL suspended

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿ ರದ್ದಾಗಿದೆ. ಐಪಿಎಲ್‌ನ ನಾಲ್ಕು ಫ್ರಾಂಚೈಸಿಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 14ನೇ ವೃತ್ತಿಯ ಐಪಿಎಲ್ ಅನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ರದ್ದುಗೊಳಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್‌, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್‌ ಕೋಚ್ ಲಕ್ಷ್ಮೀಪತಿ ಬಾಲಾಜಿ, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ 14ನೇ ಆವೃತ್ತಿಯನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಲಾಗಿದೆ.

ಐಪಿಎಲ್ 2021ರ ಆವೃತ್ತಿ ರದ್ದೆಂದು ಘೋಷಿಸಲ್ಪಟ್ಟ ಬೆನ್ನಲ್ಲೇ ಟ್ವಿಟರ್‌ನಲ್ಲಿ ತಮಾಷೆಯ ಪೋಸ್ಟ್‌ಗಳು ಹರಿದಾಡತೊಡಗಿವೆ. ಕ್ರಿಕೆಟ್ ಅಭಿಮಾನಿಗಳು ಈ ಸಂಗತಿಯನ್ನು ತಮಾಷೆಯಾಗಿ ತೆಗೆದುಕೊಂಡು ನಗು ತರಿಸುವ ಮೀಮ್ಸ್‌ಗಳನ್ನು ತಯಾರಿಸಿ ಹಾಕಿಕೊಂಡಿದ್ದಾರೆ. ನೋಡುವಾಗ ನಗು ಉಕ್ಕಿಸಬಲ್ಲ ಆಯ್ದ ಕೆಲವು ಪೋಸ್ಟ್‌ಗಳು ಇಲ್ಲಿವೆ ನೋಡಿ..

ಈ ಬಾರಿಯ ಐಪಿಎಲ್ ರದ್ದಾದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಚೊಚ್ಚಲ ಟ್ರೋಫಿ ಗೆಲ್ಲುವ ಕನಸೂ ಮಣ್ಣಾಗಿದೆ. ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆರ್‌ಸಿಬಿ ಟೂರ್ನಿಯ ಆರಂಭದಲ್ಲೇ ಸಾಲು ಸಾಲು ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಪ್ರಶಸ್ತಿ ಸುತ್ತಿಗೇರಿ ಟ್ರೋಫಿ ಎತ್ತುವ ಆರ್‌ಸಿಬಿ ಆಸೆ ಕೈಗೂಡಿಲ್ಲ.

Story first published: Tuesday, May 4, 2021, 16:48 [IST]
Other articles published on May 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+