ಐಪಿಎಲ್: ಈ ವಿಶೇಷ ದಾಖಲೆಯಿರುವುದು ಆರ್‌ಸಿಬಿ ಹೆಸರಿನಲ್ಲಿ ಮಾತ್ರ!

ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಪರೂಪದ ದಾಖಲೆಗೆ ಕಾರಣವಾಗಿದೆ. ಗುರುವಾರ (ಏಪ್ರಿಲ್ 22) ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಈ ಸಾಧನೆ ಮೆರೆದಿದೆ. ಈ ವಿಶೇಷ ದಾಖಲೆ ಇರುವುದು ಆರ್‌ಸಿಬಿ ಹೆಸರಿನಲ್ಲಿ ಮಾತ್ರ ಅನ್ನೋದು ವಿಶೇಷ.
ಗುರುವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್ 20 ಓವರ್‌ಗೆ 9 ವಿಕೆಟ್ ಕಳೆದು 177 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ ಅಜೇಯ 72, ದೇವದತ್ ಪಡಿಕ್ಕಲ್ ಅಜೇಯ 101 ರನ್‌ನೊಂದಿಗೆ 16.3 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 181 ರನ್ ಗಳಿಸಿತು.

ಅಪರೂಪದ ದಾಖಲೆ
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿಗೆ ಸಿಕ್ಕ ಜಯ ಈ ಟೂರ್ನಿಯಲ್ಲಿ ಸಿಕ್ಕ ಸತತ 4ನೇ ಜಯ. ಐಪಿಎಲ್ ಇತಿಹಾಸದಲ್ಲೇ ಒಂದು ತಂಡ ಟೂರ್ನಿ ಆರಂಭದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದಿಲ್ಲ. ಅದರಲ್ಲೂ ನಾಲ್ಕು ಪಂದ್ಯಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಪಂದ್ಯ ಗೆದ್ದಿರುವ ದಾಖಲೆ ಇಲ್ಲ. ಈ ಅಪರೂಪದ ದಾಖಲೆ ಈಗ ಆರ್‌ಸಿಬಿ ಹೆಸರಿಗೆ ಸೇರಿದೆ.

ಕಪ್ ಗೆಲ್ಲುವ ನಿರೀಕ್ಷೆ
ಐಪಿಎಲ್ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಜಯ ಮತ್ತು ಒಟ್ಟು ನಾಲ್ಕು ಪಂದ್ಯಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆದ್ದ ದಾಖಲೆಗೆ ವಿರಾಟ್ ಕೊಹ್ಲಿ ಪಡೆ ಕಾರಣವಾಗಿದೆ. 4 ಪಂದ್ಯಗಳಲ್ಲಿ ಗೆದ್ದು 8 ಪಾಯಿಂಟ್ಸ್‌ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆ ಮೂಡಿಸಿದೆ.

ಆರ್‌ಸಿಬಿಗರ ಅದ್ಭುತ ಸಾಧನೆ
ಈ ಸೀಸನ್‌ನಲ್ಲಿ ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿದ ಪ್ರತೀ ಪಂದ್ಯದಲ್ಲೂ ಆರ್‌ಸಿಬಿ ಆಟಗಾರರು ಜವಾಬ್ದಾರಿಯುತ ಆಟ ಪ್ರದರ್ಶಿಸುತ್ತಿದ್ದಾರೆ. ಖುಷಿಯ ಸಂಗತಿಯೆಂದರೆ, ಈ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ದಾಖಲೆ ಪಟ್ಟಿಯಲ್ಲಿ ಆರ್‌ಸಿಬಿ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಶಿಖರ್ ಧವನ್ ಇದ್ದಾರೆ. ಅತ್ಯಧಿಕ ವಿಕೆಟ್ ಪಟ್ಟಿಯಲ್ಲಿ ಆರ್‌ಸಿಬಿಯ ಹರ್ಷಲ್ ಪಟೇಲ್ ನಂ.1 ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ದೀಪಕ್ ಚಾಹರ್ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications