ಆರ್‌ಸಿಬಿ ಆಟಗಾರ ಡೇನಿಯಲ್ ಸ್ಯಾಮ್ಸ್‌ಗೆ ಕೊರೊನಾ ಸೋಂಕು

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭದ ಹೊಸ್ತಿಲಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಹಿನ್ನಡೆ ಸಂಗತಿ ಎದುರಾಗಿದೆ. ಆಸ್ಟ್ರೇಲಿಯಾದ ಬೌಲಿಂಗ್ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್‌ಗೆ ಕೋವಿಡ್-19 ಪಾಸಿಟಿವ್ ಬಂದಿದೆ.
ಡೇನಿಯಲ್ ಸ್ಯಾಮ್ಸ್‌ಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಧಿಕೃತ ಟ್ವೀಟ್ ಮೂಲಕ ಖಾತರಿಪಡಿಸಿದೆ. ಕೋವಿಡ್-19 ಸೋಂಕು ತಗುಲಿದ್ದರೂ ಸ್ಯಾಮ್ಸ್‌ಗೆ ಯಾವುದೇ ಗುಣಲಕ್ಷಣಗಳು ಕಂಡುಬಂದಿಲ್ಲ.
ಟ್ವೀಟ್ ಮೂಲಕ ವಿಷಯ ತಿಳಿಸಿರುವ ಆರ್‌ಸಿಬಿ ಟ್ವೀಟ್‌ನಲ್ಲಿ, 'ಏಪ್ರಿಲ್ 3ರಂದು ಚೆನ್ನೈ ಹೋಟೆಲ್‌ಗೆ ಬಂದಿಳಿದಾಗ ಡೇನಿಯಲ್ ಸ್ಯಾಮ್ಸ್ ಪರೀಕ್ಷೆಗೆ ಒಳಗಾಗಿದ್ದರು. ಅವರ ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಆದರೆ ಏಪ್ರಿಲ್ 7ರಂದು ಅವರ 2ನೇ ಪರೀಕ್ಷೆ ಪಾಸಿಟಿವ್ ಬಂದಿದೆ. ಸ್ಯಾಮ್ಸ್‌ಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಅವರೀಗ ವೈದ್ಯಕೀಯ ಸೌಲಭ್ಯವಿರುವಲ್ಲಿ ಐಸೊಲೇಶನ್‌ನಲ್ಲಿದ್ದಾರೆ,' ಎಂದು ಬರೆದುಕೊಂಡಿದೆ.
ಏಪ್ರಿಲ್ 9ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಇದಕ್ಕೂ ಮುನ್ನವೇ ಆರ್‌ಸಿಬಿಗೆ ಹಿನ್ನಡೆಯಾಗಿದೆ. 28ರ ಹರೆಯದ ಬಲಗೈ ಬೌಲಿಂಗ್ ಆಲ್ ರೌಂಡರ್ ಸ್ಯಾಮ್ಸ್ 4 ಟಿ20ಐ ಇನ್ನಿಂಗ್ಸ್‌ಗಳಲ್ಲಿ 54 ರನ್, 4 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications