ಕೇನ್ ರಿಚರ್ಡ್ಸನ್ ಬದಲು ಆರ್‌ಸಿಬಿ ತಂಡ ಸೇರಿದ ಸ್ಕಾಟ್ ಕುಗ್ಗೆಲೀಜ್ನ್

ಬೆಂಗಳೂರು: ಏಪ್ರಿಲ್ 25ರ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ಹಿನ್ನಡೆಯ ಸಂಗತಿ ಕೇಳಿಬಂದಿತ್ತು. ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಮತ್ತು ಸ್ಪಿನ್ನರ್ ಆ್ಯಡಂ ಜಂಪಾ ಐಪಿಎಲ್‌ನಿಂದ ಹೊರ ನಡೆಯುವ ನಿರ್ಧಾರ ಪ್ರಕಟಿಸಿದ್ದರು. ಆದರೆ ಈಗ ಆರ್‌ಸಿಬಿಗೆ ಖುಷಿಯ ಸಂಗತಿ ಕೇಳಿ ಬಂದಿದೆ.
14ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ನ್ಯೂಜಿಲೆಂಡ್‌ನ ವೇಗಿ ಸ್ಕಾಟ್ ಕುಗ್ಗೆಲೀಜ್ನ್ ಸೇರಿಕೊಂಡಿದ್ದಾರೆ. ಮಂಗಳವಾರ (ಏಪ್ರಿಲ್ 27) ಆರ್‌ಸಿಬಿ ಫ್ರಾಂಚೈಸಿ ಈ ಸಂಗತಿ ಖಾತರಿಪಡಿಸಿದೆ. ತಂಡ ತೊರೆದಿರುವ ಕೇನ್ ರಿಚರ್ಡ್ಸನ್ ಬದಲಿಗೆ ಕುಗ್ಗೆಲೀಜ್ನ್ ಅವರನ್ನು ತರಲಾಗಿದೆ.
ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳಿಂದಾಗಿ ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ (ರಾಜಸ್ಥಾನ್ ರಾಯಲ್ಸ್), ಕೇನ್ ರಿಚರ್ಡ್ಸನ್ ಮತ್ತು ಸ್ಪಿನ್ನರ್ ಆ್ಯಡಂ ಜಂಪಾ ಐಪಿಎಲ್‌ನಿಂದ ಹೊರ ನಡೆಯುವ ನಿರ್ಧಾರ ಪ್ರಕಟಿಸಿದ್ದರು.
ಸದ್ಯ ಕುಗ್ಗೆಲೀಜ್ನ್ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೀಸಲು ಆಟಗಾರರಾಗಿದ್ದಾರೆ. ಹೀಗಾಗಿ ಕುಗ್ಗೆಲೀಜ್ನ್ ಮುಂಬೈ ಬಯೋಬಬಲ್ ಒಳಗಿದ್ದಾರೆ. ಇನ್ನು ಕುಗ್ಗೆಲೀಜ್ನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಯೋ ಬಬಲ್ ಸೇರಿಕೊಳ್ಳಲಿದ್ದಾರೆ. ಕುಗ್ಗೆಲೀಜ್ನ್ ಕಿವೀಸ್ ಪರ 2 ಟೆಸ್ಟ್ ಪಂದ್ಯಗಳಲ್ಲಿ 5 ವಿಕೆಟ್, 16 ಟಿ20ಐ ಪಂದ್ಯಗಳಲ್ಲಿ 15 ವಿಕೆಟ್, 2 ಐಪಿಎಲ್ ಪಂದ್ಯಗಳಲ್ಲಿ 2 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications