ಐಪಿಎಲ್ : ಬೆಂಗಳೂರು ತಂಡದ ಹೊಸ ಜರ್ಸಿ ವಿನ್ಯಾಸ ವೈರಲ್

ಹೊಸ ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಹೊಸ ಪ್ರಾಯೋಜಕರು ಮತ್ತು ಹೊಸ ತಂಡಗಳ ಜರ್ಸಿ. ಕೆಲ ತಂಡಗಳು ತಮ್ಮ ಕಿಟ್‌ನ ವಿನ್ಯಾಸವನ್ನು ಬದಲಾಯಿಸಲು ನಿರ್ಧಾರ ಮಾಡಿದ್ದರೆ ಇನ್ನ ಕೆಲ ತಂಡಗಳು ತಮ್ಮ ಜರ್ಸಿಯಲ್ಲಿ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಬಳಸಲಿದ್ದಾರೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈ ಬಾರಿ ತನ್ನ ಜರ್ಸಿಯಲ್ಲಿ ಬದಲಾವಣೆಗಳನ್ನು ತರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಲ್ಲ ಮೂಲಗಳ ಮಾಹಿತಿ ಪ್ರಕಾರ ಏಪ್ರಿಲ್ ಮೊದಲನೇ ವಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಜರ್ಸಿ ಅನಾವರಣಗೊಳ್ಳಲಿದೆ ಎನ್ನಲಾಗುತ್ತಿದೆ. ಬೆಂಗಳೂರು ತಂಡ ಹೊಸ ಜರ್ಸಿಯನ್ನು ಅನಾವರಣ ಮಾಡಲಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ತಂಡದ ಕೆಲವೊಂದಷ್ಟು ಹೊಸ ವಿನ್ಯಾಸದ ಜರ್ಸಿಯ ಫೋಟೋಗಳು ಹರಿದಾಡುತ್ತಿವೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬೆಂಗಳೂರು ತಂಡದ ಆ ಜರ್ಸಿಗಳ ಫೋಟೊ ಮುಂದೆ ಇವೆ ನೋಡಿ.
ಆರ್‌ಸಿಬಿ ತಂಡದ ಅಭಿಮಾನಿಗಳಲ್ಲಿ ಈಗಾಗಲೇ ಹೊಸ ಜರ್ಸಿ ಕುರಿತು ಕುತೂಹಲಗಳು ಮೂಡಿದೆ. ಕಳೆದ ವರ್ಷವೂ ಸಹ ಹೊಸ ವಿನ್ಯಾಸದ ಜರ್ಸಿ ಧರಿಸಿ ಆಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಯಾವ ರೀತಿಯ ಜರ್ಸಿ ಬಳಸಲಿದೆ ಎಂಬುದು ಅಧಿಕೃತವಾಗಿ ಏಪ್ರಿಲ್ ಮೊದಲನೇ ವಾರ ಹೊರಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications