Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಾಬ್‌ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲು ವಿರಾಟ್ ಪಡೆ ಸಜ್ಜು

PL 2021: RCB targets No. 1 spot in points table by beating Punjab Kings

ಈ ಬಾರಿಯ ಆವೃತ್ತಿಯ ಆರಂಭದಿಂದಲೂ ವಿರಾಟ್ ಕೊಹ್ಲಿ ಪಡೆ ಸಾಕಷ್ಟು ಅದ್ಭುತವಾದ ಪ್ರದರ್ಶನ ನೀಡಿಕೊಂಡು ಬಂದಿದ್ದು ಅಂಕಪಟ್ಟಿಯಲ್ಲಿ ಅಗ್ರ ಮೂರರಲ್ಲಿ ಸತತವಾಗಿ ಸ್ಥಾನವನ್ನು ಉಳಿಸಿಕೊಳ್ಳುತ್ತಾ ಸಾಗಿದೆ. ಸದ್ಯ ವಿರಾಟ್ ಕೊಹ್ಲಿ ಪಡೆ ಮೂರನೇ ಸ್ಥಾನದಲ್ಲಿದ್ದು ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದರೆ ಮತ್ತೆ ಅಗ್ರ ಸ್ಥಾನಕ್ಕೆ ತಲುಪುವ ಅವಕಾಶವಿದೆ.

ಸದ್ಯ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರು ಪಂದ್ಯಗಳಲ್ಲಿ ಐದು ಗೆಲುವು ಸಾಧಿಸಿರುವ ಸಿಎಸ್‌ಕೆ 10 ಅಂಕಗಳನ್ನು ಗಳಿಸಿದೆ. ಆರ್‌ಸಿಬಿ ಕೂಡ ಆರು ಪಂದ್ಯಗಳನ್ನು ಆಡಿದ್ದು ಚೆನ್ನೈ ವಿರುದ್ಧದ ಒಂದು ಸೋಲು ಹೊರತು ಪಡಿಸಿ ಉಳಿದ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿದೆ.

ಅಂಕಗಳ ಆಧಾರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಗೂ ಧೋನಿ ನೇತೃತ್ವದ ಸಿಎಸ್‌ಕೆ ಸಮ ಸಾಧನೆಯನ್ನು ಮಾಡಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರನ್‌‌ರೇಟ್ ಅತ್ಯುತ್ತಮವಾಗಿದ್ದು ಆರ್‌ಸಿಬಿಗಿಂತ ಮುಂದಿದೆ. ಹೀಗಾಗಿ ಮೊದಲ ಸ್ಥಾನದಲ್ಲಿದೆ.

ಕಳೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ತಂಡದ ಬ್ಯಾಟ್ಸ್‌ಮನ್‌ಗಳ ಅಸ್ಥಿರತೆಯನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ಅದ್ಭುತವಾದ ಪ್ರದರ್ಶನವನ್ನು ನೀಡಿದೆ. ಇದು ಆರ್‌ಸಿಬಿ ಪಾಲಿಗೆ ಮುಂದಿನ ಪಂದ್ಯಗಳಲ್ಲಿಯೂ ಸಾಕಷ್ಟು ಉತ್ಸಾಹವನ್ನು ನೀಡಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಆರ್‌ಸಿಬಿ ಮೇಲುಗೈ ಸಾಧಿಸಲು ಇದು ಕಾರಣವಾಗಬಹುದು.

ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ರನ್ ಗಳಿಸದಿದ್ದರೂ ಇಬ್ಬರು ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಪಡಿಕ್ಕಲ್ ಒಂದು ಶತಕದ ಸಾಧನೆಯನ್ನು ಕೂಡ ಮಾಡಿ ಮಿಂಚಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಡಿವಿಲಿಯರ್ಸ್ ಫಾರ್ಮ್ ಆರ್‌ಸಿಬಿ ಮತ್ತಷ್ಟು ಆಶಾದಾಯದ ಬೆಳವಣಿಗೆಯಾಗಿದೆ. ಬೌಲಿಂಗ್ ವಿಚಾರವಾಗಿಯೂ ಆರ್‌ಸಿಬಿಗೆ ಸಾಕಷ್ಟು ಸಕಾರಾತ್ಮಕ ಅಂಶಗಳು ಇರುವುದು ಪಂಜಾಬ್‌ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

Story first published: Friday, April 30, 2021, 15:03 [IST]
Other articles published on Apr 30, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+