Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ರಾಯಲ್ ಚಾಲೆಂಜರ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ದಿನಾಂಕ, ಸಮಯ ಹಾಗೂ ಸ್ಥಳ

IPL 2021: RCB time table, Full Schedule, date, venue

ಐಪಿಎಲ್ ಟೂರ್ನಿಯ 14ನೇ ಆವೃತ್ತಿಗೆ ಮುಹೂರ್ತ ನಿಗದಿಯಾಗಿದ್ದು ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಏಪ್ರಿಲ್ 9 ರಿಂದ ಆರಂಭವಾಗುವ ಈ ಟೂರ್ನಿ ಮೇ 30ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯಕಾಣಲಿದೆ. ಎರಡು ವರ್ಷಗಳ ನಂತರ ಈ ಟೂರ್ನಿ ಭಾರತದಲ್ಲಿ ನಡೆಯಲು ಸಜ್ಜಾಗಿದೆ.

ಈ ಬಾರಿಯ ಐಪಿಎಲ್ ಟೂರ್ನಿಯನ್ನು ಭಾರತದ ಆರು ನಗರಗಳಲ್ಲಿ ಆಯೋಜಿಸಲಾಗುತ್ತದೆ. ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದಿಲ್ಲಿ, ಮುಂಬೈ ಮತ್ತು ಕೊಲ್ಕತ್ತಾದಲ್ಲಿ ಆಯೋಜನೆಯಾಗಲಿದೆ. ಏಪ್ರಿಲ್ 9ರಂದು ಚೆನ್ನೈನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಚರ್ಸ್ ಬೆಂಗಳೂರು ಮಧ್ಯೆ ನಡೆಯಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿರುವ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿದೆ

ಈ ಬಾರಿಯ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಚೊಚ್ಚಲ ಪ್ರಶಸ್ತಿಗಾಗಿ ಸೆಣೆಸಾಡಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಜೊತೆಗೆ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಡಲಿಳಿಯುವ ಮೂಲಕ ಆರ್‌ಸಿಬಿ ತನ್ನ ಅದೃಷ್ಟ ಪರೀಕ್ಷೆಯನ್ನು ನಡೆಸಲಿದೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

1. ಏಪ್ರಿಲ್ 9: ಆರ್‌ಸಿಬಿ vs ಮುಂಬೈ ಇಂಡಿಯನ್ಸ್, ಚೆನ್ನೈ, ಸಮಯ ಸಂಜೆ 7.30
2. ಏಪ್ರಿಲ್ 14: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ, ಸಮಯ ಸಂಜೆ 7.30
3. ಏಪ್ರಿಲ್ 18: ಆರ್‌ಸಿಬಿ vs ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ, ಸಮಯ ಮಧ್ಯಾಹ್ನ 3.30
4. ಏಪ್ರಿಲ್ 22: ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್, ಮುಂಬೈ, ಸಮಯ ಸಂಜೆ 7.30
5. ಏಪ್ರಿಲ್ 25: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ, ಸಮಯ ಮಧ್ಯಾಹ್ನ 3.30
6. ಏಪ್ರಿಲ್ 27: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್, ಅಹ್ಮದಾಬಾದ್, ಸಮಯ ಸಂಜೆ 7.30
7. ಏಪ್ರಿಲ್ 30: ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಅಹ್ಮದಾಬಾದ್, ಸಮಯ ಸಂಜೆ 7.30
8. ಮೇ 3: ಆರ್‌ಸಿಬಿ vs ಕೊಲ್ಕತ್ತಾ ನೈಟ್ ರೈಡರ್ಸ್, ಅಹ್ಮದಾಬಾದ್, ಸಮಯ ಸಂಜೆ 7.30
9. ಮೇ 6: ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಅಹ್ಮದಾಬಾದ್, ಸಮಯ ಸಂಜೆ 7.30
10. ಮೇ 9: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತಾ, ಸಮಯ ಸಂಜೆ 7.30
11. ಮೇ 14: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ, ಸಮಯ ಸಂಜೆ 7.30
12. ಮೇ 16: ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್, ಕೋಲ್ಕತಾ, ಸಮಯ ಮಧ್ಯಾಹ್ನ 3.30
13. ಮೇ 20: ಆರ್‌ಸಿಬಿ vs ಮುಂಬೈ ಇಂಡಿಯನ್ಸ್, ಕೋಲ್ಕತಾ, ಸಮಯ ಸಂಜೆ 7.30
14. ಮೇ 23: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ, ಸಮಯ ಸಂಜೆ 7.30

Story first published: Monday, March 8, 2021, 8:19 [IST]
Other articles published on Mar 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+