RCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ಎಂಟು ಫ್ರಾಂಚೈಸಿಗಳ ಆಟಗಾರರು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಬಯೋ ಬಬಲ್ ಒಳಗೆ ಜೊತೆ ಸೇರಿದ್ದಾರೆ. ನಗದು ಶ್ರೀಮಂತ ಟೂರ್ನಿಗೆ ತಂಡಗಳು ಅಂತಿಮ ಹಂತದ ತಯಾರಿ ನಡೆಸುತ್ತಿವೆ. ಸೆಪ್ಟೆಂಬರ್‌ 19ರಿಂದ ಆರಂಭಗೊಳ್ಳುವ ಐಪಿಎಲ್ ಅಕ್ಟೋಬರ್‌ 15ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

5ನೇ ಟೆಸ್ಟ್ ರದ್ದಿನ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ5ನೇ ಟೆಸ್ಟ್ ರದ್ದಿನ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ

ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಐಪಿಎಲ್ ದ್ವಿತೀಯ ಹಂತಕ್ಕೆ ಸಿದ್ಧವಾಗಿದೆ. ಸೆಪ್ಟೆಂಬರ್‌ 20ರಿಂದ ಆರ್‌ಸಿಬಿ ಸ್ಪರ್ಧೆ ಶುರುವಾಗಲಿದೆ. ದ್ವಿತೀಯ ಹಂತದಲ್ಲಿ ಆರಂಭಿಕ ಪಂದ್ಯದ ವೇಳೆ ಆರ್‌ಸಿಬಿ ಬ್ಲೂ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಕೋವಿಡ್- ವಾರಿಯರ್ಸ್‌ಗೆ ಗೌರವ ಸೂಚಕವಾಗಿ ಆರ್‌ಸಿಬಿ ವಿಶೇಷ ಜೆರ್ಸಿ ಧರಿಸಲಿದೆ.

ಟ್ವಿಟರ್ ಮೂಲಕ ವಿಶೇಷ ಜೆರ್ಸಿಯ ಮಾಹಿತಿಯಿತ್ತ ಆರ್‌ಸಿಬಿ

ಟ್ವಿಟರ್ ಮೂಲಕ ವಿಶೇಷ ಜೆರ್ಸಿಯ ಮಾಹಿತಿಯಿತ್ತ ಆರ್‌ಸಿಬಿ

ಐಪಿಎಲ್ ದ್ವಿತೀಯ ಹಂತದ ವೇಳೆ ವಿಶೇಷ ಜೆರ್ಸಿಯೊಂದಿಗೆ ಆರ್‌ಸಿಬಿ ಕಣಕ್ಕಿಳಿಯಲಿರುವುದಾಗಿ ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದೆ. ಸೆಪ್ಟೆಂಬರ್ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಆರ್‌ಸಿಬಿ ನೀಲಿ ಜೆರ್ಸಿ ಧರಿಸಲಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಕೋವಿಡ್ ವಾರಿಯರ್ಸ್ ಧರಿಸುವ ಪಿಪಿಇ ಕಿಟ್‌ಗೆ ಹೋಲಿಕೆಯಾಗುವಂತೆ ನಾವು ಕ್ರೀಡಾ ಬ್ಲೂ ಕಿಟ್ ಧರಿಸಲಿದ್ದೇವೆ. ಕೋವಿಡ್ ಪಿಡುಗಿನ ಈ ಸಮಯದಲ್ಲಿ ಈ ಮೂಲಕ ಕೋವಿಡ್ ವಾರಿಯರ್ಸ್‌ಗೆ ಬೆಲೆ ಕಟ್ಟಲಾಗದ ಸೇವೆಗೆ ಗೌರವ ಸೂಚಿಸಲಿದ್ದೇವೆ," ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ವಿಡಿಯೋದಲ್ಲಿ ಮಾತನಾಡಿ, ಆರ್‌ಸಿಬಿ ಬ್ಲೂ ಜೆರ್ಸಿ ಮೂಲಕ ಕೋವಿಡ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯಾದ್ರೂ ಕಪ್‌ ನಮ್ದಾಗುತ್ತಾ?

ಈ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡುತ್ತಿದೆ. ಸದ್ಯದ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಒಂದು ಬಾರಿಯೂ ಕಪ್‌ ಗೆಲ್ಲದ ತಂಡವೆಂಬ ಹಣೆಪಟ್ಟಿಯನ್ನು ಬಿಚ್ಚಿ ಕೆಳಗಿಡಲು ಆರ್‌ಸಿಬಿಗೆ ಈ ಬಾರಿ ಒಳ್ಳೆಯ ಅವಕಾಶವಿದೆ. ಆದರೆ ಇನ್ನುಳಿದ ಪಂದ್ಯಗಳಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಬೇಕಷ್ಟೆ. ಈ ಬಾರಿ ಆರ್‌ಸಿಬಿ ತಂಡಕ್ಕೆ ಹೊಸ ಬಲಿಷ್ಠ ಆಟಗಾರರು ಸೇರ್ಪಡೆಯಾಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೆ ತಂಡ ಅಂಕಪಟ್ಟಿಯಲ್ಲಿ ಮೇಲೇರುವ ನಿರೀಕ್ಷೆಯಿದೆ. 2016, 2011, 2009ರಲ್ಲಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ ಒಮ್ಮೆಯೂ ಟ್ರೋಫಿ ಜಯಿಸಿಲ್ಲ. ಐಪಿಎಲ್ ದ್ವಿತೀಯ ಹಂತದಲ್ಲಿ ಸೆಪ್ಟೆಂಬರ್‌ 20ರಂದು ಆರ್‌ಸಿಬಿ ಮೊದಲ ಪಂದ್ಯವನ್ನಾಡಲಿದೆ. ಆರಂಭಿಕ ಪಂದ್ಯವಾಗಿ ಆರ್‌ಸಿಬಿ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ. ಈ ಪಂದ್ಯ ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ 7.30 pmಗೆ ನಡೆಯಲಿದೆ.

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada
27 ದಿನಗಳವರೆಗೆ ದ್ವಿತೀಯ ಹಂತದ ಐಪಿಎಲ್ ಟೂರ್ನಿ

27 ದಿನಗಳವರೆಗೆ ದ್ವಿತೀಯ ಹಂತದ ಐಪಿಎಲ್ ಟೂರ್ನಿ

ಭಾರತದಲ್ಲಿ ನಡೆದಿದ್ದ ಐಪಿಎಲ್ ಆರಂಭಿಕ ಹಂತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್‌ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, September 14, 2021, 11:43 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X