ಐಪಿಎಲ್ 2021, ಆರ್‌ಸಿಬಿ vs ಡಿಸಿ, ಟಾಸ್ ವರದಿ, ಪ್ಲೇಯಿಂಗ್ XI, Live ಸ್ಕೋರ್

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು ಈ ಬಾರಿಯ ಐಪಿಎಲ್‌ನ ಕೊನೆಯ ಲೀಗ್ ಪಂದ್ಯವನ್ನಾಡುತ್ತಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದಿದ್ದು ಮೊದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.
ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎರಡು ತಂಡಗಳು ಕೂಡ ಯಾವುದೇ ಬದಲಾವನೆಯನ್ನು ಮಾಡಿಕೊಳ್ಳದೆ ಕಣಕ್ಕಿಳಿಯುತ್ತಿವೆ. ಆರ್‌ಸಿಬಿ ಅಂತಿಮ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿದ್ದರೂ ತಂಡದ ಸಂಯೋಜನೆ ಉತ್ತಮವಾಗಿದೆ ಎಂಬ ಕಾರಣಕ್ಕೆ ತಂಡದ ಆಟಗಾರರನ್ನು ಬದಲಾಯಿಸದಿರಲು ತಂಡ ತೀರ್ಮಾನಿಸಿದೆ. ಹೀಗಾಗಿ ಈ ಹಿಂದಿನ ಪಂದ್ಯದಲ್ಲಿ ಆಡಿದ ಎಲ್ಲಾ ಆಟಗಾರರು ಕೂಡ ಈ ಪಂದ್ಯದಲ್ಲಿಯೂ ಕಣಕ್ಕಿಳಿಯಲಿದ್ದಾರೆ.
ಸದ್ಯ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವಲ್ಲಿದೆ. ಆಡಿದ 13 ಪಂದ್ಯಗಳಲ್ಲಿ 10 ಪಂದ್ಯ ಗೆದ್ದಿರುವ ಡಿಸಿ 20 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಸೋತರೂ ಅಥವಾ ಗೆದ್ದರೂ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಲಾರದು.
ಮತ್ತೊಂದೆಡೆ ಆರ್‌ಸಿಬಿ ತಂಡ 13 ಪಂದ್ಯಗಳಲ್ಲಿ 8 ಪಂದ್ಯ ಗೆದ್ದಿದ್ದು ಐದರಲ್ಲಿ ಸೋತಿದೆ. ಹೀಗಾಗಿ ಖಾತೆಯಲ್ಲಿ 16 ಅಂಕಗಳನ್ನು ಹೊಂದಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಎರಡು ಅಂಕಗಳ ಸೇರ್ಪಡೆಯೊಂದಿಗೆ 18 ಅಂಕಗಳನ್ನು ಆರ್‌ಸಿಬಿ ಗಳಿಸಲಿದ್ದು ಅಂಕಗಳಿಗೆಯಲ್ಲಿ ಎರಡನೇ ಸ್ಥಾನದಲ್ಲಿರುವ ಸಿಎಸ್‌ಕೆ ಜೊತೆಗೆ ಸಮಾನವಾಗಲಿದೆ. ಆದರೆ ನೆಟ್‌ರನ್‌ರೇಟ್‌ನಲ್ಲಿ ಧೋನಿ ಪಡೆ ಆರ್‌ಸಿಬಿಗಿಂತ ಬಹಳ ಮುಂದಿದೆ. ಇದನ್ನು ಸರಿಗಟ್ಟಲು ಆರ್‌ಸಿಬಿ ಮುಂದೆ ಅಸಾಧ್ಯ ಗುರಿಯಿದ್ದು ಆರ್‌ಸಿಬಿ ಮೂರನೇ ಸ್ಥಾನಿಯಾಗಿ ಪ್ಲೇಆಫ್ ಆಡುವುದು ಬಹುತೇಕ ಖಚಿತ. ಹೀಗಾಗಿ ಆರ್‌ಸಿಬಿ ಪ್ಲೇಆಫ್‌ನಲ್ಲಿ ಎಲಿಮಿನೇಟರ್ ಪಂದ್ಯವನ್ನು ಆಡುವ ಸಾಧ್ಯತೆ ದಟ್ಟವಾಗಿದೆ.
ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ರಿಪಾಲ್ ಪಟೇಲ್, ಶಿಮ್ರಾನ್ ಹೆಟ್ಮೀರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications