For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೊಲ್ಕತ್ತಾ ವಿರುದ್ಧ 9 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿದ ಆರ್‌ಸಿಬಿ

IPL 2021, RCB vs KKR, match 31, KKR won the match by 9 wickets

ಐಪಿಎಲ್ 14ನೇ ಆವೃತ್ತಿಯ ಮೊದಲ ಚರಣದ ಟೂರ್ನಿಯಲ್ಲಿ ಆರ್‌ಸಿಬಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದರೂ ಎರಡನೇ ಚರಣದ ಆರಂಭದ ಪಂದ್ಯದಲ್ಲಿ ಇದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಆರ್‌ಸಿಬಿ ವಿಫಲವಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್‌ಗಳ ಭಾರೀ ಅಂತರದ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಕೇವಲ 92 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ಕೆಕೆಆರ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.

ಆರ್‌ಸಿಬಿ ತಂಡದ ಆರಂಭಿಕ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ವೆಂಗಟೇಶ್ ಐಯ್ಯರ್ ಹತ್ತೇ ಓವರ್‌ಗಳಲ್ಲಿ ಈ ಗುರಿಯನ್ನು ತಲುಪುವಂತೆ ಮಾಡಿದರು. ಗೆಲುವಿನ ಸನಿಹದಲ್ಲಿರುವಾಗ ಶುಬ್ಮನ್ ಗಿಲ್ ವಿಕೆಟ್ ಕಳೆದುಕೊಂಡರು. ನಂತರ ವೆಂಕಟೇಶ್ ಐಯ್ಯರ್ ಗೆಲುವಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಪರೂಪಕ್ಕೆ ಎಂಬಂತೆ ಟಾಸ್ ಗೆದ್ದಿದ್ದರು. ಆದರೆ ಇದರ ಲಾಭವನ್ನು ಪಡೆಯುವಲ್ಲಿ ಮಾತ್ರ ತಂಡ ಸಂಪೂರ್ಣವಾಗಿ ವಿಫಲವಾಯಿತು. ಆರ್‌ಸಿಬಿ ತಂಡದ ದಾಂಡಿಗರು ಆರಂಭದಿಂದಲೇ ಮುಗ್ಗರಿಸಲು ಆರಂಭಿಸಿತ್ತು. ಸ್ವತಃ ನಾಯಕ ವಿರಾಟ್ ಕೊಹ್ಲಿಯೇ ಈ ಕುಸಿತಕ್ಕೆ ಚಾಲನೆ ನಿಡಿದ್ದರು. ಕೇವಲ 5 ರನ್‌ಗಳಿಸಿದ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಎಲ್ಲಾ ಆಟಗಾರರು ಕೂಡ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು.

ಬ್ಯಾಟಿಂಗ್ ವಿಭಾಗದ ಸಂಪೂರ್ಣ ವೈಫಲ್ಯ

ಬ್ಯಾಟಿಂಗ್ ವಿಭಾಗದ ಸಂಪೂರ್ಣ ವೈಫಲ್ಯ

ನಾಯಕ ವಿರಾಟ್ ಕೊಹ್ಲಿ 5 ರನ್‌ಗಳಿಸಿದರೆ ದೇವದತ್ ಪಡಿಕ್ಕಲ್ 22 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಚೊಚ್ಚಲ ಪಂದ್ಯವನ್ನಾಡಿದ ಶ್ರೀಕರ್ ಭರತ್ 16 ರನ್‌ಗಳಿಗೆ ಆಟವನ್ನು ಮುಗಿಸಿದರು. ನಂತರ ಬ್ಯಾಟಿಂಗ್‌ಗೆ ಇಳಿದ ಎಬಿ ಡಿವಿಲಿಯರ್ಸ್ ಎದುರಿಸಿದ ಮೊದಲ ಎಸೆತಕ್ಕೇ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ನಂತರ ಸಚಿನ್ ಬೇಬಿ, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಕೈಲ್ ಜಾಮಿಸನ್, ಹರ್ಷಲ್ ಪಟೇಲ್ ಕೂಡ ನಿರಾಸೆ ಮೂಡಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 22 ರನ್‌ಗಳಿಸಿದ ದೇವದತ್ ಪಡಿಕ್ಕಲ್ ಹೈಯೆಸ್ಟ್ ಸ್ಕೋರರ್ ಎನಿಸಿದ್ದಾರೆ. ಅಂತಿಮವಾಗಿ ಆರ್‌ಸಿಬಿ ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ 92 ರನ್‌ಗಳಿಸಿ ಆಲೌಟ್ ಆಯಿತು.

ಮಿಂಚಿದ ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್

ಮಿಂಚಿದ ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್

ಇನ್ನು ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಏಟು ನೀಡಿದ್ದು ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್. ಈ ಇಬ್ಬರು ಬೌಲರ್‌ಗಳು ತಲಾ 3 ವಿಕೆಟ್ ಕಿತ್ತು ಮಿಂಚಿದ್ದಾರೆ. ಅದರಲ್ಲೂ ರಸೆಲ್ ಶ್ರೀಕರ್ ಭರತ್ ಹಾಗೂ ಎಬಿ ಡಿವಲಿಯರ್ಸ್ ವಿಕೆಟ್‌ಗಳನ್ನು ಒಂದೇ ಓವರ್‌ನಲ್ಲಿ ಪಡೆಯುವ ಮೂಲಕ ಆರ್‌ಸಿಬಿಗೆ ಆಘಾತ ನೀಡಿದರು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಕನ್ನಡಿದ ಪ್ರಸಿದ್ಧ್ ಕೃಷ್ಣ ಮಿಂಚಿದರು.

ಬೌಲಿಂಗ್‌ನಲ್ಲಿಯೂ ಭಾರೀ ವೈಫಲ್ಯ

ಬೌಲಿಂಗ್‌ನಲ್ಲಿಯೂ ಭಾರೀ ವೈಫಲ್ಯ

ಇನ್ನು ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗ ಕೂಡ ಈ ಪಂದ್ಯದಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸುವ ಮೂಲಕ ಆತಂಕ ಮೂಡಿಸಿದೆ. ಮೊದಲ ಚರಣದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆರ್‌ಸಿಬಿ ಬೌಲರ್‌ಗಳು ಯುಎಇ ಚರಣದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಕೇಲ್ ಜ್ಯಾಮಿಸನ್, ವನಿಂದು ಹಸರಂಗ ಹಾಗೂ ಚಾಹಲ್ 10ಕ್ಕೂ ಅಧಿಕ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಯುಜುವೇ<�ದ್ರ ಚಾಹಲ್ ಆರ್‌ಸಿಬಿ ಪರವಾಗಿ ಏಕೈಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

RCB vs KKR ಪಂದ್ಯದ ನಡುವೆ ಕಾಣಿಸಿಕೊಂಡ ಕಿಚ್ಚ Sudeep | Oneindia Kannada
ಎರಡು ತಂಡಗಳ ಆಡುವ ಬಳಗ ಹೀಗಿದೆ

ಎರಡು ತಂಡಗಳ ಆಡುವ ಬಳಗ ಹೀಗಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ವನಿಂದು ಹಸರಂಗ, ಸಚಿನ್ ಬೇಬಿ, ಕೈಲ್ ಜೇಮೀಸನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್

ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನೀಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ

Story first published: Thursday, September 30, 2021, 18:46 [IST]
Other articles published on Sep 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+